»   »  ರಾಖಿ ಆಯ್ತು ಇದೀಗ ರಂಭಾ ಸ್ವಯಂವರಂ!

ರಾಖಿ ಆಯ್ತು ಇದೀಗ ರಂಭಾ ಸ್ವಯಂವರಂ!

Subscribe to Filmibeat Kannada

ಆಧುನಿಕ ಸ್ವಯಂವರಕ್ಕೆ ನಾಂದಿ ಹಾಡಿದ ರಾಖಿ ಸಾವಂತ್ ಹಾದಿಯಲ್ಲಿ ಹಲವು ನಟಿಯರು ಹೆಜ್ಜೆಹಾಕಲಿದ್ದಾರೆ. ಗ್ಲಾಮರ್ ಗೊಂಬೆ ಎಂದೇ ಖ್ಯಾತರಾದ ನಟಿ ರಂಭಾ ಇದೀಗ ಸ್ವಯಂವರಕ್ಕೆ ಅಣಿಯಾಗುತ್ತಿದ್ದಾರೆ. ಇದಕ್ಕಾಗಿ ಅವರು ತಮಿಳು ಚಾನೆಲ್ ನ ಮೊರೆ ಹೋಗಿದ್ದಾರೆ.

ರಂಭಾ ಅವರ ತಂದೆ ತಾಯಿ ಸೂಕ್ತ ವರನಿಗಾಗಿ ಹುಡುಕಿದ್ದೇ ಬಂತು. ಮೂರು ವರ್ಷಗಳ ಅವರ ಹುಡುಕಾಟ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಅವರ ನಿರೀಕ್ಷೆಯ ವರ ಸಿಗಲಿಲ್ಲ.ಹಾಗಾಗಿ ರಂಭಾ ಸ್ವಯಂವರಕ್ಕೆ ವೇದಿಕೆಯನ್ನು ಸಿದ್ಧ ಮಾಡುತ್ತಿದ್ದಾರೆ! ಸ್ವಯಂವರಕ್ಕೆ ರಂಭಾ ಪುಳಕಗೊಂಡಿದ್ದು ಅವರ ತಂದೆತಾಯಿಯನ್ನು ಒಪ್ಪಿಸುವಲ್ಲಿ ಯಶಸ್ವಿಯೂ ಆಗಿದ್ದಾರಂತೆ.

ಇದು ತಮ್ಮ ಜೀವನವನ್ನೇ ಬದಲಾಯಿಸುತ್ತ್ತದೆ ಎಂಬ ನಂಬಿಕೆ ರಂಭಾ ಅವರದು. ಕಾರ್ಯಕ್ರಮದಿಂದ ಬರುವ ಲಾಭದಲ್ಲಿ ಅರ್ಧದಷ್ಟು ನಮಗೆ ಕೊಡಬೇಕು ಎಂಬ ಕರಾರನ್ನು ಚಾನಲ್ ನ ಮುಂದಿಟ್ಟಿದ್ದಾರೆ ರಂಭಾ ಪೋಷಕರು. ಈ ಒಪ್ಪಂದಕ್ಕೆ ಚಾನಲ್ ನವರು ಸಹ ಕೋಲೆ ಬಸವನ ತರಹ ತಲೆಯಾಡಿಸಿದ್ದಾರಂತೆ.

ತೆರೆಮರೆಯಲ್ಲಿ ಸ್ವಯಂವರದ ಪೂರ್ವ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮದಿಂದ ಸಾಕಷ್ಟು ಲಾಭವಾಗಲಿದೆ . ಕಾರ್ಯಕ್ರಮ ಖಂಡಿತ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸದಲ್ಲಿದೆ ಚಾನೆಲ್. ಒಟ್ಟಿನಲ್ಲಿ ಮೂರ್ಖರ ಪೆಟ್ಟಿಗೂ ಒಂದು ಕಾಲ ಬಂದಿದೆ. ಸ್ವಯಂವರದ ಮೂಲಕ ಮದುವೆಗಳಿಗೆ ವೇದಿಕೆಯಾಗುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ತಮಿಳು ಮತ್ತು ತೆಲುಗಿನ ಬಹುತೇಕ ನಟಿಯರು ವರನ ಬೇಟೆಗಾಗಿ ಮೂರ್ಖರ ಪೆಟ್ಟಿಗೆಗೆ ಮುಗಿಬಿದ್ದಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada