»   »  ಕನ್ನಡಕ್ಕೆ ಮತ್ತೆ ಅತುಲ್ ಕುಲಕರ್ಣಿ ಆಗಮನ

ಕನ್ನಡಕ್ಕೆ ಮತ್ತೆ ಅತುಲ್ ಕುಲಕರ್ಣಿ ಆಗಮನ

Subscribe to Filmibeat Kannada

'ಆ ದಿನಗಳು' ಚಿತ್ರದಲ್ಲಿ ಅಗ್ನಿ ಶ್ರೀಧರ್ ಪಾತ್ರವನ್ನು ಪೋಷಿಸಿದ್ದ ಅತುಲ್ ಕುಲಕರ್ಣಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. ಎರಡು ವರ್ಷಗಳ ಸುದೀರ್ಘ ಸಮಯದ ಬಳಿಕ ಹಿಂತಿರುಗುತ್ತಿರುವ ಅತುಲ್ ಕನ್ನಡದ ಎರಡು ಚಿತ್ರಗಳಲ್ಲಿ ಸದ್ಯಕ್ಕೆ ಬಿಜಿ.

ಬಿಯಾಂಕ ದೇಸಾಯಿ ಮುಖ್ಯ ಭೂಮಿಕೆಯ ಗೀತಾ ಕೃಷ್ಣ ನಿರ್ದೇಶನದ 'ಕಾಫಿ ಶಾಫ್' ಚಿತ್ರದಲ್ಲಿ ಅತುಲ್ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಅತುಲ್ ಅವರದು ಋಣಾತ್ಮಕ ಅಂಶಗಳುಳ್ಳ ಪಾತ್ರ. ಓಂ ಪ್ರಕಾಶ್ ರಾವ್ ನಿರ್ದೇಶನದ 'ಎಕೆ 56' ಅತುಲ್ ಅಭಿನಯಿಸುತ್ತಿರುವ ಮತ್ತೊಂದು ಚಿತ್ರ. ಇದರಲ್ಲಿ ಅವರದು ನಿರ್ಣಾಯಕ ಪಾತ್ರ.

ಮರಾಠಿ ರಂಗಭೂಮಿ ಕಲಾವಿದನಾಗಿ ತಮ್ಮ್ಮ ವೃತ್ತಿ ಜೀವನ ಆರಂಭಿಸಿದ ಅತುಲ್, ನಂತರ ಕೇಸರಿ ಹರವು ಅವರ 'ಭೂಮಿ ಗೀತ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟರು. ಆನಂತರ ಅತುಲ್ ಹಿಂದಿ ಚಿತ್ರರಂಗದಲ್ಲಿ ಬಿಜಿಯಾದರು. ಆ ದಿನಗಳು ಚಿತ್ರದ ಪಾತ್ರಕ್ಕಾಗಿ ಅತುಲ್ ರನ್ನು ಅಗ್ನಿ ಶ್ರೀಧರ್ ಕರೆತಂದಿದ್ದರು. ಇದೀಗ ಮತ್ತೆ ಅವರ ಆಗಮನವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada