»   » ನಂದಿಬೆಟ್ಟದಲ್ಲಿ ಧೂದ್ ಪೇಡ ದಿಗಂತ್ ಪುತ್ರ ಗೀತೆ

ನಂದಿಬೆಟ್ಟದಲ್ಲಿ ಧೂದ್ ಪೇಡ ದಿಗಂತ್ ಪುತ್ರ ಗೀತೆ

Posted By:
Subscribe to Filmibeat Kannada

ಧೂದ್ ಪೇಡ ದಿಗಂತ್ ಮತ್ತು ರೂಪಶ್ರೀ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಪುತ್ರ. ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ನಂದಿಬೆಟ್ಟದಲ್ಲಿ ಚಿತ್ರೀಕರಿಸಲಾಯಿತು. ರಾಂನಾರಾಯಣ್ ರಚನೆಯ 'ಕಾಲೇಜು ಜನರೇಶನ್ ಯಾರ ಮಾತು ಕೇಳಲ್ಲಾ ಹಾರ್ಟ್‌ನಲ್ಲಿ ವೈಬ್ರೇಶನ್ ಎಂದಿಗೂ ಮುಗಿಯಲ್ಲಾ ಎಂಬ ಹಾಡಿಗೆ ರಾಜಾ ನೃತ್ಯ ನಿರ್ದೇಶನದಲ್ಲಿ ದಿಗಂತ್ ಹಾಗೂ ರೂಪಶ್ರೀ ಹೆಜ್ಜೆ ಹಾಕಿದರು.

ಈ ಗೀತೆಯ ಚಿತ್ರೀಕರಣದೊಂದಿಗೆ 'ಪುತ್ರ' ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ ಎಂದು ನಿರ್ದೇಶಕ ಉಮಾಕಾಂತ್ ತಿಳಿಸಿದ್ದಾರೆ. ರೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಂಥೋಣಿಪಾಲ್ ಆವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಟಿ.ಸತ್ಯನಾರಾಯಣರ ಸಹ ನಿರ್ಮಾಣವಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಮೇಲುಕೋಟೆ, ನಂದಿಬೆಟ್ಟ ಹಾಗೂ ಚಿಕ್ಕಮಗಳೂರಿನಲ್ಲಿ ಒಟ್ಟು ನಲವತ್ತೈದು ದಿನಗಳ ಕಾಲ ನಡೆದಿದೆ. ಸದ್ಯದಲ್ಲೆ ಮಾತಿನ ಜೋಡಣೆ ಆರಂಭವಾಗಲಿದೆ.

ಆರು ಹಾಡುಗಳಿರುವ ಈ ಚಿತ್ರಕ್ಕೆ ರಮೇಶ್‌ರಾಜಾ ಸಂಗೀತ ನೀಡಿದ್ದಾರೆ. ರವಿಸುವರ್ಣ ಛಾಯಾಗ್ರಹಣ, ಬಾಬುಖಾನ್ ಕಲಾನಿರ್ದೇಶನ, ಚಂದ್ರಮಯೂರ್ ಹಾಗೂ ರಾಜಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ಹಾಗೂ ರಾಮಣ್ಣನವರ ನಿರ್ಮಾಣ ನಿರ್ವಹಣೆಯಿದೆ. ದಿಗಂತ್, ಸುಪ್ರೀತಾ, ರೂಪಶ್ರೀ, ಅವಿನಾಶ್, ಟೆನ್ನಿಸ್‌ಕೃಷ್ಣ, ಸುಧಾಬೆಳವಾಡಿ, ಸುಂದರರಾಜ್ ತಾರಾಬಳಗ ಚಿತ್ರಕ್ಕಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada