»   »  ಒಂದು ವಾರ ಮೊದಲೇ ತೆರೆಕಂಡ ಮಿ.ಪೈಂಟರ್!

ಒಂದು ವಾರ ಮೊದಲೇ ತೆರೆಕಂಡ ಮಿ.ಪೈಂಟರ್!

Subscribe to Filmibeat Kannada

ಜುಲೈ 24ರಂದು ಬಿಡುಗಡೆಯಾಗಬೇಕಿದ್ದ 'Mr.ಪೈಂಟರ್' ಚಿತ್ರ ಕೊನೆಕ್ಷಣದಲ್ಲಿನ ಬದಲಾವಣೆಗಳ ಕಾರಣ ಜುಲೈ.17 ರಂದೇ ತೆರೆಕಂಡಿದೆ. ಜೊತೆಗೆ ಜಗ್ಗೇಶ್ ಅಭಿನಯದ 'ಎದ್ದೇಳು ಮಂಜುನಾಥ' ಹಾಗೂ ತರುಣ್ ಮತ್ತು ರಾಧಿಕಾ ಪಂಡಿತ್ ಮುಖ್ಯಭೂಮಿಕೆಯ 'ಲವ್ ಗುರು' ಚಿತ್ರಗಳು ಬಿಡುಗಡೆಯಾಗಿವೆ.

ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳು ಸೇರಿದಂತೆ ಪಿವಿಆರ್ ನಲ್ಲೂ ಮಿ.ಪೈಂಟರ್ ಚಿತ್ರ ಪ್ರದರ್ಶನವಾಗುತ್ತಿದೆ. ದಿನೇಶ್ ಬಾಬು ಚಿತ್ರ ಎಂದ ಮೇಲೆ ಪ್ರೇಕ್ಷಕ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡೆ ಚಿತ್ರಮಂದಿರಕ್ಕೆ ಅಡಿಯಿಡುತ್ತಾನೆ.ಸಾಲದಕ್ಕೆ ಲೂಸ್ ಮಾದ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಝಣ ಝಣ ಎಂದು ಸದ್ದು ಮಾಡುತ್ತಿವೆ.

ಅಂದಹಾಗೆ ಮಿ.ಪೈಂಟರ್ ಚಿತ್ರದಲ್ಲಿ ಯೋಗೀಶ್, ರಂಗಾಯಣ ರಘು, ಶರಣ್, ಶಿವಧ್ವಜ್, ರವಿಶಂಕರ್, ಜಯಜಗದೀಶ್, ಶ್ರೀನಿವಾಸಮೂರ್ತಿ, ವೆಂಕಟಾದ್ರಿ, ರಮನೀತೋಚೌದರಿ, ಆಶಾಲತಾ, ವೀಣಾಸುಂದರ್, ರೇಖಾ ಕುಮಾರ್, ಲಕ್ಷ್ಮೀಹೆಗಡೆ, ರೂಪಶ್ರೀ ಅವರ ಅಭಿನಯವಿದೆ.

ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಹಾಗೂ ವಿವಾದಗಳನ್ನು ಸುತ್ತಿಕೊಂಡಿರುವ 'ಹೌಸ್ ಫುಲ್' ಚಿತ್ರಜುಲೈ24ರಂದು ತೆರೆಕಾಣಲಿದೆ. ಅಂದೇ ಮಯೂರ್ ಪಟೇಲ್ ಅಭಿನಯದ 'ಮುನಿಯಾ 'ಚಿತ್ರವೂ ತೆರೆಕಾಣಲಿದೆ. '1000% ಕಾಮೆಡಿ 0% ಬೋರು'ಎಂಬ ಅಡಿಬರಹವನ್ನು ಹೇಮಂತ್ ಹೆಗಡೆ ತಮ್ಮ ಹೌಸ್ ಫುಲ್ ಚಿತ್ರಕ್ಕೆ ನೀಡಿದ್ದಾರೆ. ಇನ್ನು 'ಜೊತೆಗಾರ' ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada