»   »  ಸೆನ್ಸಾರ್ ನಲ್ಲಿ ಗೆದ್ದ ಗಿಲ್ಲಿ ಗೆ ಯು/ಎ ಸರ್ಟಿಫಿಕೇಟ್!

ಸೆನ್ಸಾರ್ ನಲ್ಲಿ ಗೆದ್ದ ಗಿಲ್ಲಿ ಗೆ ಯು/ಎ ಸರ್ಟಿಫಿಕೇಟ್!

Subscribe to Filmibeat Kannada

ಜಗ್ಗೇಶ್‌ರ ಪುತ್ರ ಗುರುರಾಜ್ ಅಭಿನಯದ ಪ್ರಥಮ ಚಿತ್ರ 'ಗಿಲ್ಲಿ'ಯನ್ನು ನಿರ್ಮಾಪಕರಾದ ಅಣಜಿ ನಾಗರಾಜ್, ಜಯಣ್ಣ ಹಾಗೂ ಪ್ರತಾಪ್. ಜೆ.ಎನ್. ಫಿಲಂಸ್ ಲಾಂಛನದಲ್ಲಿ ತಯಾರಿಸುತ್ತಿದ್ದು, ಈ ಚಿತ್ರವನ್ನು ಸತ್ಯ ಇನ್ ಲವ್ ನಿರ್ದೇಶಕ ರಾಘವ್ ಲೋಕಿ ನಿರ್ದೇಶಿಸುತ್ತಿದ್ದಾರೆ.

ಉತ್ತರ ಭಾರತ ಮೂಲದ ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ದುರಂತ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕಿ ಪೊರ್ಕಿ ನಾಯಕನನ್ನು ಸರಿದಾರಿಗೆ ತಂದು ದುರಂತ ಸಾವೀಗೀಡಾಗುತ್ತಾಳೆ. ನಾಯಕ ತನ್ನ ಪ್ರೇಮಿ ಸತ್ತಿದ್ದರೂ ಬದುಕಿದ್ದಾಳೆಂದು ಪ್ರೀತಿಸುತ್ತಾನೆ. ನಂದಿನಿ ಲೇ ಔಟ್ ಸುತ್ತಮುತ್ತ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಲಾಗಿದೆ.

ನಲವತ್ತು ದಿನಗಳಲ್ಲಿ ಐದು ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಹೊರಬಂದು ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶನಗೊಂಡು ಯು/ಎ ಪ್ರಮಾಣಪತ್ರ ಗಳಿಸಿದೆ. ಅಕ್ಟೋಬರ್ 2ರ ಗಾಂಧಿಜಯಂತಿಯಂದು ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಮಳೆ ಮೋಡಿಗಾರ ಕೃಷ್ಣ ಇಲ್ಲಿಯೂ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಮೂಲ ಚಿತ್ರಕ್ಕೆ ಸಂಗೀತ ನೀಡಿದ್ದ ಯುವನ್ ಶಂಕರ್ ರಾಜಾ ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಧಾ ಬೆಳವಾಡಿ, ವೀಣಾ ವೆಂಕಟೇಶ್, ಶ್ರೀನಿವಾಸ್ ಅಲ್ಲದೆ, ಜಗ್ಗೇಶ್‌ರ ಇನ್ನೊಬ್ಬ ಪುತ್ರ ಯತಿರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada