»   » ಜಯಾ ಟಿವಿಯಿಂದ ನಟಿ ಖುಷ್ಬುಗೆ ಗೇಟ್ ಪಾಸ್

ಜಯಾ ಟಿವಿಯಿಂದ ನಟಿ ಖುಷ್ಬುಗೆ ಗೇಟ್ ಪಾಸ್

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ಖುಷ್ಬು ಕೆಲಸ ಕಳೆದುಕೊಂಡಿದ್ದಾರೆ. ಅರೆ! ಇದೇನು ಈಕೆ ಇಷ್ಟು ದಿನ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು! ಎಂಬುದು ತಾನೆ ನಿಮ್ಮ ಗುಮಾನಿ. ಎಐಎಡಿಎಂಕೆ ನಾಯಕಿ ಜಯಲಲಿತಾ ಒಡೆತನದ ಜಯಾ ಟಿವಿಯಲ್ಲಿ ಖುಷ್ಬು ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು.

ಖುಷ್ಬು ಇತ್ತೀಚೆಗೆ ಡಿಎಂಕೆ ಪಕ್ಷ ಸೇರಿದ್ದೆ ತಡ ಆಕೆಯನ್ನು ಕೆಲಸದಿಂದ ಹೊರಗಟ್ಟಿದ್ದಾರೆ ಜಯಲಲಿತಾ. ಈ ಮೂಲಕ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಎಐಎಡಿಎಂಕೆ ನಾಯಕಿ ಜಯಲಲಿತಾ ನಡುವಿನ ಬದ್ಧ ದ್ವೇಷಕ್ಕೆ ಖುಷ್ಬು ಬಲಿಯಾಗಿದ್ದಾರೆ. ಜಯಾ ಟಿವಿಯಲ್ಲಿ 'ಜಾಕ್ ಪಾಟ್' ಎಂಬ ಜಯಪ್ರಿಯ ಗೇಮ್ ಶೋ ಒಂದನ್ನು ಖುಷ್ಬು ನಡೆಸಿಕೊಡುತ್ತಿದ್ದರು.

ಕಳೆದ ಒಂಭತ್ತು ವರ್ಷಗಳಿಂದ ಖುಷ್ಬು ಈ ಗೇಮ್ ಶೋ ನಿರಾತಂಕವಾಗಿ ನಡೆಸಿಕೊಂಡು ಬರುತ್ತಿದ್ದರು. ಡಿಎಂಕೆ ಪಕ್ಷ ಸೇರಿದ ಬಳಿಕವೂ ಈ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ಪತ್ರಿಕೆಗಳಿಗೆ ತಿಳಿಸಿದ್ದರು. ಆದರೆ ಅಷ್ಟರಲ್ಲಾಗಲೆ ಜಯಲಲಿತಾ ಕೆಂಗಣ್ಣಿಗೆ ಗುರಿಯಾಗಿ ಖುಷ್ಬುಗೆ ಗೇಟ್ ಪಾಸ್ ಕೊಡಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada