»   »  ಒಂಬತ್ತು ಪಾತ್ರಗಳ ಕಥಾ ಹಂದರವೇ ಶಿಶಿರ

ಒಂಬತ್ತು ಪಾತ್ರಗಳ ಕಥಾ ಹಂದರವೇ ಶಿಶಿರ

Posted By:
Subscribe to Filmibeat Kannada
ಉತ್ಸಾಹೀ ತರುಣ ಮಂಜು ಸ್ವರಾಜ್ ಅವರ ನಿರ್ದೇಶನದ ಪ್ರಥಮ ಪ್ರಯತ್ನವಾದ ಶಿಶಿರ ಚಿತ್ರ ಈಗಾಗಲೇ ಸೋಮುವಾರಪೇಟೆ, ಬಾಗಮಂಡಲ ಸುತ್ತಮುತ್ತ ಹಾಗೂ ಬೆಂಗಳೂರಿನಲ್ಲಿ 40ದಿನಗಳ ಕಾಲ ಶೂಟಿಂಗ್ ನಡೆಸಿ ಚಿತ್ರೀಕರಣ ಸಂಪೂರ್ಣ ಗೊಳಿಸಿದ್ದು ಪ್ರಸಾದ್ ಧ್ವನಿಗ್ರಹಣ ಕೇಂದ್ರದಲ್ಲಿ ಡಬ್ಬಿಂಗ್ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದೆ.

ಈ ಚಿತ್ರದಲ್ಲಿ ನಾಯಕ, ನಾಯಕಿ ಸೇರಿ 9 ಪ್ರಮುಖ ಪಾತ್ರಗಳು ಕಥಾ ಹಂದರಲ್ಲಿ ಸುಳಿದಾಡುತ್ತವೆ. ನಟಿ ಪ್ರೇಮಾ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಪ್ರತಿಯೊಂದು ಹಾಡೂ ಒಂದೊಂದು ವಿಶೇಷತೆಯಿಂದ ಕೂಡಿದೆ. ಒಂದು ಜೋಗುಳದ ಹಾಡನ್ನು ಮಕ್ಕಳೇ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಅಜನೀಶ್ ಹೇಳುತ್ತಾರೆ.

ನಾಯಕ ಯಶಸ್ ಹಾಗೂ ನಾಯಕಿ ಮೇಘನ ಜೊತೆ 2 ಪುಟಾಣಿಗಳು ಹಾಗೂ 7.5 ಅಡಿ ಎತ್ತರದ ಸಂತೋಷ್ ಎಂಬ ಯುವಕ ಅಭಿನಯಿಸಿದ್ದಾರೆ. ಸುರೇಶ್ ಬಾಬುರವರ ಛಾಯಾಗ್ರಹಣ ಕೆ.ಎಂ.ಪ್ರಕಾಶ್‌ರ ಸಂಕಲನ ಇದ್ದು ಬಿ.ಮಹಾದೇವ್ ಹಾಗೂ ಬಿ.ಟಿ.ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಶಿಶಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರೇಮಾ
ಐಶ್ವರ್ಯ ರೈ ತಾರಾ ವರ್ಚಸ್ಸು ಒಂದಿನಿತು ಕುಗ್ಗಿಲ್ಲ!
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ವಿವಾಹ
ಡ್ಯಾನಿ ಬಾಯ್ಲ್ ನಿರ್ದೇಶನದಲ್ಲಿ ಐಶ್ವರ್ಯ ರೈ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada