»   » 47ರ ಜಗ್ಗೇಶ್ ಗೆ ಹುಟ್ಟುಹಬ್ಬದ ಶುಭಾಶಯ

47ರ ಜಗ್ಗೇಶ್ ಗೆ ಹುಟ್ಟುಹಬ್ಬದ ಶುಭಾಶಯ

Posted By:
Subscribe to Filmibeat Kannada

'ಎದ್ದೇಳು ಮಂಜುನಾಥ' ಚಿತ್ರದ ಮುಖಾಂತರ ಹಾಸ್ಯ ಮತ್ತು ಮ್ಯಾನರಿಸಂ ಮೀರಿದ ನಟನೆಯ ಮಜಲನ್ನು ದಾಟಿದ ನವರಸ ನಾಯಕ ಜಗ್ಗೇಶ್ ಮಾರ್ಚ್ 17ರಂದು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಜಗ್ಗೇಶ್ ಮುಟ್ಟದ ಪಾತ್ರಗಳೇ ಇಲ್ಲ. ಪೋಷಕ, ಖಳ, ನಾಯಕ, ಹಾಸ್ಯ ಪಾತ್ರಗಳ ಮೂಲಕ ವಿಶಿಷ್ಟ ನಟನಾಶೈಲಿ ಮತ್ತು ವಿಭಿನ್ನ ಡೈಲಾಗ್ ಡೆಲಿವರಿಯಿಂದ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಜಗ್ಗೇಶ್ ಐವತ್ತರ ಸನಿಹಕ್ಕೆ ಜಾರುತ್ತಿದ್ದಾರೆ. ಸದ್ಯಕ್ಕೆ ರಾಜಕೀಯದತ್ತ ಮುಖ ಮಾಡಿರುವ ಜಗ್ಗೇಶ್ ಸದ್ಯಕ್ಕೆ ಎರಡು ದೋಣಿಯ ಪಯಣವನ್ನು ಮುಂದುವರಿಸಿದ್ದಾರೆ.

ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಕೈಲಿಂದ ಕೊಸರಿಕೊಂಡು ಕೆಸರಿನ ಕಮಲವನ್ನು ಕೈಯಲ್ಲಿ ಹಿಡಿದಿರುವ ಜಗ್ಗೇಶ್ ಮೇಲ್ಮನೆ ಸದಸ್ಯರಾಗಿ ರಾಜಕೀಯದಲ್ಲಿಯೂ ನೆಲೆ ಕಂಡಿದ್ದಾರೆ. ಆದರೆ, ಅವರ ರಾಜಕೀಯ ಜೀವನ ನಟನಾ ಜೀವನವನ್ನು ಕಡೆಗಣಿಸುವಂತೆ ಮಾಡದಿರಲಿ ಎಂಬುದು ಅಭಿಮಾನಿಗಳ ಆಶಯ. ಸದ್ಯಕ್ಕೆ ಅವರ ಮಕ್ಕಳೇ ಬೆಳ್ಳಿತೆರೆಗೆ ಜಿಗಿದಿರುವುದರಿಂದ ಜಗ್ಗೇಶ್ ಸದ್ಯಕ್ಕೆ ನೇಪಥ್ಯಕ್ಕೆ ಸರಿದಿದ್ದಾರೆ.

ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada