ಉಂಗುರ ಬದಲಾಯಿಸಿಕೊಂಡ ಸ್ನೇಹಾ ಮತ್ತು ಪ್ರಸನ್ನ

ಅದೊಂದು ಕಾರ್ಯಕ್ರಮಕ್ಕೆ ಇಬ್ಬರನ್ನೂ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಇಬ್ಬರೂ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ. "ಹೀಗಾಗುತ್ತದೆ ಎಂದು ಮೊದಲೇ ಗೊತ್ತಿದ್ದರೆ ನಮ್ಮ ತಂದೆ ತಾಯಿಯನ್ನೂ ಕರೆದುಕೊಂಡು ಬರುತ್ತಿದ್ದೆ" ಎಂದು ಪ್ರಸನ್ನ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಪ್ರಸನ್ನ ಹಾಗೂ ಸ್ನೇಹಾ ಇಬ್ಬರೂ ಒಟ್ಟಿಗೆ ತಮಿಳಿನ 'ಅಚಮುಂಡು ಅಚಮುಂಡು' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು. ತಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಶೀಘ್ರದಲ್ಲೆ ಮದುವೆಯನ್ನೂ ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ ಈ ತಾರಾ ಪ್ರೇಮಿಗಳು. (ಎಜೆನ್ಸೀಸ್)
English summary
Beautiful couple Sneha and Prasanna exchanged their rings on the occasion of Valentine's Day. Hold on! It was not an official ceremony rather a private event.


Click it and Unblock the Notifications