»   » ಮೆನನ್ ಕೈಹಿಡಿಯಲಿದ್ದಾರೆ ನವ್ಯಾ ನಾಯರ್!

ಮೆನನ್ ಕೈಹಿಡಿಯಲಿದ್ದಾರೆ ನವ್ಯಾ ನಾಯರ್!

Subscribe to Filmibeat Kannada

ಮಲ್ಲು ಬೆಡಗಿ ನವ್ಯಾ ನಾಯರ್ ಕಡೆಗೂ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಶೀಘ್ರದಲ್ಲೇ ತಾವು ಹಸೆಮಣೆ ಏರುವುದಾಗಿ ತಿಳಿಸಿರುವ ನವ್ಯಾ ನಾಯರ್ ಸಪ್ತಪದಿ ತುಳಿಯುವುದು ಗ್ಯಾರಂಟಿಯಾಗಿದೆ. ಈ ಹಿಂದೆ ತಾವು ಮದುವೆಯಾಗುತ್ತಿಲ್ಲ, ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿ ನುಣುಚಿಕೊಂಡಿದ್ದರು.

ಆದರೆ ಇದೀಗ ನವ್ಯಾ ನಾಯರ್ ಅವರ ತಂದೆ ತಾಯಿ ವರನ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ನವ್ಯಾ ಅವರ ತಂದೆ ರಾಜು ಅವರ ಪ್ರಕಾರ, ಆಕೆಯ ಮದುವೆ ಸಂತೋಷ್ ಮೆನನ್ ಅವರೊಂದಿಗೆ ನಡೆಯಲಿದೆ. ಈತ ಮುಂಬೈ ಮೂಲದ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಮಾರುಕಟ್ಟೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಾಗಲೇ ನವ್ಯಾ ಅವರ ಹುಟ್ಟೂರಾದ ಕೇರಳದ ಛಂಗಣಾಸೆರಿಯಲ್ಲಿ ಸಂತೋಷ್ ಆಕೆಯನ್ನು ನೋಡಿಕೊಂಡು ಹೋಗಿದ್ದಾರೆ. ನವ್ಯಾ ನಾಯರ್ ಅವರನ್ನು ಮದುವೆಯಾಗುವುದಾಗಿ ಸಂತೋಷ್ ತಿಳಿಸಿದ್ದಾಗಿ ರಾಜು ತಿಳಿಸಿದ್ದಾರೆ. ಇಬ್ಬರ ಜಾತಕಗಳೂ ಕೂಡಿವೆ ಬಂದಿದ್ದು ಶೀಘ್ರದಲ್ಲೇ ಇಬ್ಬರಿಗೂ ಮದುವೆ ಮಾಡಿ ಮುಗಿಸುವುದಾಗಿ ಅವರು ಹೇಳಿದ್ದಾರೆ.

ಇಷ್ಟು ದಿನ ಇಬರಿಬ್ಬರೂ ಮೊಬೈಲ್ ನಲ್ಲೇ ಮಾತಾಡಿಕೊಳ್ಳುತ್ತಿದ್ದರು. ಇದೀಗ ಜಾತಕಗಳು ಕೂಡಿಬಂದ ಕಾರಣ ಇಬ್ಬರೂ ವೈಯಕ್ತಿಕವಾಗಿ ಭೇಟಿಯಾಗಲು ತಮ್ಮದೇನು ಅಡ್ಡಿಯಿಲ್ಲ ಎನ್ನ್ನುತ್ತಾರೆ ನವ್ಯಾ ಅವರ ತಂದೆ ರಾಜು. ನವ್ಯಾ ನಾಯರ್ ಮತ್ತು ಸಂತೋಷ್ ಮೆನನ್ ಅವರ ಮದುವೆ ನಿಶ್ಚಿತಾರ್ಥವಿಲ್ಲದೆ ನಡೆಯಲಿದೆಯಂತೆ. 2010ರ ಜನವರಿಯಲ್ಲಿ ನವ್ಯಾ ಜೀವನದಲ್ಲಿ ಘಟ್ಟಿಮೇಳ ಮೊಳಗಲಿದೆ.

'ಗಜ' ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ನವ್ಯಾ ನಾಯರ್ ನಂತರ ವಿಷ್ಣುವರ್ಧನ್ ಜತೆ 'ನಂ ಯಜಮಾನ್ರು', ಶಿವರಾಜ್ ಕುಮಾರ್ ಜತೆ 'ಭಾಗ್ಯದ ಬಳೆಗಾರ', ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ 'ಬಾಸ್' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada