ವಿಷ್ಣುವರ್ಧನ ನಂತರ ದ್ವಾರಕೀಶ್ 'ಚಾರುಲತಾ'

ಇದೀಗ ವಿಷ್ಣುವರ್ಧನದಲ್ಲಿ ನಾಯಕಿಯರಲ್ಲೊಬ್ಬರಾಗಿದ್ದ ಪ್ರಿಯಾಮಣಿಯನ್ನು ಪ್ರಧಾನವಾಗಿಟ್ಟುಕೊಂಡು 'ಚಾರುಲತಾ' ಎಂಬ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ದ್ವಾರಕೀಶ್, ಇದೇ ತಿಂಗಳು ಅಂದರೆ ಮಾರ್ಚ್ 23, 2012 ರ ಯುಗಾದಿ ಶುಭದಿನದಂದು ಮುಹೂರ್ತವಿಟ್ಟುಕೊಂಡಿದ್ದಾರೆ. ನಾಯಕಿ ಪ್ರಧಾನವಾಗಿರುವುದು ಮಾತ್ರವಲ್ಲ, ನಾಯಕ ಇರುವುದೇ ಇಲ್ಲ ಎಂಬ ಸುದ್ದಿಯೂ ಹರಿದಾಡುತ್ತಿರುವುದು ಸುಳ್ಳಲ್ಲ.
ವಿಷ್ಣುವರ್ಧನ ಚಿತ್ರದ ನಿರ್ದೇಶಕ ಕುಮಾರ್ ಮೇಲೆ ಮತ್ತೊಮ್ಮೆ ಭರವಸೆಯಿಟ್ಟಿರುವ ದ್ವಾರ್ಕಿ, ಚಾರುಲತಾರನ್ನೂ ಕೂಡ ಅವರ ಕೈಗೆ ಒಪ್ಪಿಸುತ್ತಿದ್ದಾರೆ. "ಇದೊಂದು ಪಕ್ಕಾ ಮನರಂಜನೆಯ ಚಿತ್ರ. ಪ್ರಿಯಾಮಣಿ ಈ ಹಿಂದೆ ನಟಿಸಿರದಂತ ಅಪರೂಪಕ್ಕೆ ಮಾತ್ರ ಸಿಗುವಂತೆ ಪಾತ್ರ" ಎಂದು ಹೇಳುವ ಮೂಲಕ ದ್ವಾರಕೀಶ್ ಪ್ರೇಕ್ಷಕರಲ್ಲಿ ಕುತೂಹಲದ ಜೊತೆ ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ. ಮುಂದಿನ ಪುಟ ನೋಡಿ...
More from Filmibeat
English summary
Actor Dwarakish is going to Produce another movie called Charulata, very shortly. Priyamani acts in Lead Role.


Click it and Unblock the Notifications











