For Quick Alerts
  ALLOW NOTIFICATIONS  
  For Daily Alerts

  ಮೇ 11ಕ್ಕೆ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ ರಾಧಿಕಾ

  By Rajendra
  |

  ಟಿಆರ್‌ಪಿ ರೇಟಿಂಗ್‌ಗಾಗಿ ಟಿವಿ ವಾಹಿನಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ. ಇದನ್ನೇ ಕಥಾವಸ್ತುವಾಗಿಟ್ಟುಕೊಂಡು 'ಬ್ರೇಕಿಂಗ್ ನ್ಯೂಸ್' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್. ಚಿತ್ರದಲ್ಲಿ ಒಂದಷ್ಟು ವಿನೋದಭರಿತ ಅಂಶಗಳೂ ಇರುತ್ತವಂತೆ.

  ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಈ ಚಿತ್ರದ ಮೇ 11ಕ್ಕೆ ಬಿಡುಗಡೆಯಾಗುತ್ತಿದೆ. ಪ್ರವೀಣ್ ಸ್ಟೀಫನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕೃಷ್ಣ ಕುಮಾರ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಕೆಲವೊಂದು ಪ್ರಾಣಿಗಳನ್ನು ಬಳಸಿಕೊಂಡಿರುವ ಬಗ್ಗೆಯೂ ಪ್ರಾಣಿ ದಯಾ ಸಂಘ ಆಕ್ಷೇಪಣೆ ಕಾರಣ ಚಿತ್ರಕ್ಕೆ ಇನ್ನೂ ಸೆನ್ಸಾರ್ ಆಗಿಲ್ಲ.

  ಈ ಹಿಂದೆ ನಾಗತಿಹಳ್ಳಿ ಜೊತೆ 'ಒಲವೇ ಜೀವನ ಲೆಕ್ಕಾಚಾರ' ಚಿತ್ರದಲ್ಲಿ ರಾಧಿಕಾ ಅಭಿನಯಿಸಿದ್ದರು. 'ಕೃಷ್ಣನ್ ಲವ್ ಸ್ಟೋರಿ' ಚಿತ್ರದ ಜೋಡಿ ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ಈ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ ಮಾಡಲಿದೆ. ಚಿತ್ರದ ನಿರ್ಮಾಪಕರು ರಾಕ್‌ಲೈನ್ ವೆಂಕಟೇಶ್. (ಒನ್‌ಇಂಡಿಯಾ ಕನ್ನಡ)

  English summary
  Actress Radhika Pandit, Ajay Rao lead Kannada film Breaking News set to release on May 11, 2012. Nagathihalli Chandrashekhar is the director and Krishna Kumar is the cameraman. Praveen Stephen has scored the music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X