»   »  ಅಚ್ಚ ಹೊಸ ಕಾಪಿಯೊಂದಿಗೆ ಕರಿಯ ಮತ್ತೆ ತೆರೆಗೆ

ಅಚ್ಚ ಹೊಸ ಕಾಪಿಯೊಂದಿಗೆ ಕರಿಯ ಮತ್ತೆ ತೆರೆಗೆ

Posted By:
Subscribe to Filmibeat Kannada
Darshan
ವಾರದಲ್ಲಿ ಒಟ್ಟೊಟ್ಟಿಗೆ ಮೂರು ಕನ್ನಡ ಚಿತ್ರ ಬಿಡುಗಡೆಯಾಗುತ್ತಿರುವುದು ಹೊಸದಲ್ಲ.ಫೆಬ್ರವರಿ ಮೂರನೆ ವಾರದಲ್ಲೂ ಮೂರು ಕನ್ನಡ ಚಿತ್ರಗಳು ತೆರೆಕಾಣಲಿವೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ 'ಕರಿಯ' ಚಿತ್ರ ಮತ್ತೊಮ್ಮೆ (ಫೆ.20) ಅಚ್ಚ ಹೊಸ ಕಾಪಿಯೊಂದಿಗೆ ಬಿಡುಗಡೆಯಾಗುತ್ತಿದೆ.

ಐದು ವರ್ಷಗಳ ಹಿಂದೆ ಈ ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು.ಆಗ ನಸೀಬು ನೆಟ್ಟ್ಟಗಿಲ್ಲದ ಕಾರಣ ಚಿತ್ರ ಓಡಿದ್ದು ಅಷ್ಟಕ್ಕಷ್ಟೆ.ಕರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಚಿತ್ರದ ವಿತರಣೆ ಹಕ್ಕುಗಳನ್ನು ಇಕ್ಬಾಲ್ ಫಿಲಂಸ್ ಗೆ ಮಾರಾಟ ಮಾಡಿ ಕೈತೊಳೆದುಕೊಂಡಿದ್ದರು.

ಕರಿಯ ಚಿತ್ರ ಇಕ್ಬಾಲ್ ಕೈಸೇರಿದ್ದೇ ತಡ ಮ್ಯಾಜಿಕ್ ಸಂಭವಿಸಿ ಬಿಟ್ಟಿತು. ಎರಡನೆ ಬಾರಿಗೆ ಕರಿಯನನ್ನು ಇಕ್ಬಾಲ್ ಬಿಡುಗಡೆ ಮಾಡಿದಾಗ ಆ ಚಿತ್ರ ಶತದಿನ ಸಂಭ್ರಮ ಆಚರಿಸಿಕೊಂಡಿತು. ನಿರ್ಮಾಪಕ ಬಾಲ್ ರಾಜ್ ಗಿಂತಲೂ ವಿತರಕ ಇಕ್ಬಾಲ್ ಗೆ ಭರ್ಜರಿ ಲಾಭ ತಂದುಕೊಟ್ಟಿತು.

ಈಗ ಮತ್ತೆ ಕಪಾಲಿ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಒಟ್ಟು 20 ಚಿತ್ರಮಂದಿರಗಳಲ್ಲಿ 'ಕರಿಯ' ಅಚ್ಚ ಹೊಸ ಕಾಪಿಯೊಂದಿಗೆ ಬಿಡುಗಡೆಯಾಗುತ್ತಿದೆ. ಹೊಸ ಪ್ರಿಂಟ್ ಗಾಗಿ ಇಕ್ಬಾಲ್ ರು.40 ಲಕ್ಷ ಖರ್ಚು ಮಾಡಿದ್ದಾರಂತೆ. ದರ್ಶನ್ ಹುಟ್ಟುಹಬ್ಬದ ತಿಂಗಳಲ್ಲಿ ಕರಿಯ ಮತ್ತೊಮ್ಮೆ ಬಿಡುಗಡೆಯಾಗುತ್ತಿರುವುದರಿಂದ ಅವರ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ದರ್ಶನ್ ಹುಟ್ಟುಹಬ್ಬದ ಸವಿಸವಿ ನೆನಪುಗಳು
ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!
ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada