»   »  'ದೇವ್ರು' ಚಿತ್ರದ ವಿಚಿತ್ರ ಗೆಟಪ್ ನಲ್ಲಿ ವಿಜಯ್!

'ದೇವ್ರು' ಚಿತ್ರದ ವಿಚಿತ್ರ ಗೆಟಪ್ ನಲ್ಲಿ ವಿಜಯ್!

Subscribe to Filmibeat Kannada

'ದೇವ್ರು' ಚಿತ್ರದಲ್ಲಿ ನಟ ವಿಜಯ್ ತಲೆ ಬೋಳಿಸಿಕೊಂಡ ವಿಚಿತ್ರ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಾಧು ಕೋಕಿಲ ನಿರ್ದೇಶಿಸುತ್ತಿದ್ದು ಇತ್ತೀಚೆಗಷ್ಟೇ 'ದೇವ್ರು' ಚಿತ್ರೀಕರಣ ಮುಗಿದಿದೆ. ಸಾರ್ವಜನಿಕ ಸಲೂನ್ ನಲ್ಲಿ ಮತ್ತೆ ತಲೆ ಬೋಳಿಸಿಕೊಳ್ಳುವ ಮೂಲಕ ವಿಜಯ್ ಈ ವಿಚಿತ್ರ ಗೆಟಪನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ವಿಜಯ್, ತಮ್ಮ ಮುಂದಿನ ಚಿತ್ರ 'ಕರಿ ಚಿರತೆ' ಅಥವಾ ಎಂ ಎಸ್ ರಮೇಶ್ ಅವರ ಚಿತ್ರವಾಗಬಹುದು. ಯಾವುದು ಮೊದಲು ಎಂಬುದು ಇನ್ನೂ ನಿರ್ಧರಿಸಿಲ್ಲ. ಒಂದು ಚಿತ್ರಕ್ಕೆ ಬೋಳು ತಲೆಯ ಗೆಟಪ್ ಬೇಕಾಗುತ್ತದೆ. ಮತ್ತೊಂದಕ್ಕೆ ತಲೆಗೂದಲು ಬೇಕಾಗುತ್ತದೆ. ಹಾಗಾಗಿ ತಲೆಯನ್ನು ಇತ್ತೀಚೆಗಷ್ಟೇ ಮತ್ತೊಮ್ಮೆ ಬೋಳಿಸಿಕೊಂಡೆ ಎನ್ನುತ್ತಾರೆ.

ಕನ್ನಡಲ್ಲಿ 'ಗಜನಿ' ಚಿತ್ರ ಸೆಟ್ಟೇರಲಿದೆಯಂತೆ. ಆ ಚಿತ್ರದಲ್ಲಿ ತಾವು ನಟಿಸಲಿದ್ದೀರಿ ಎಂಬ ಮಾತು ಕೇಳಿಬರುತ್ತಿದೆಯಲ್ಲಾ ಎನ್ನಲಾಗಿ, ಇಲ್ಲ ಹಲವಾರು ಭಾಷೆಗಳಲ್ಲಿ ಬಂದ ಆ ಚಿತ್ರವನ್ನು ಪ್ರೇಕ್ಷಕರು ನೋಡಿಯಾಗಿದೆ. ಈಗ ಮತ್ತೆ ಅದೇ ಕತೆಯನ್ನು ಮಾಡುವುದರಿಂದ ಪ್ರಯೋಜನವಿಲ್ಲ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada