»   » ವಿಜಯ್ ಅಭಿನಯದ 'ದೇವ್ರು' ಈ ವಾರ

ವಿಜಯ್ ಅಭಿನಯದ 'ದೇವ್ರು' ಈ ವಾರ

Subscribe to Filmibeat Kannada

ರಾಕ್‌ಲೈನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸಿರುವ 'ದೇವ್ರು ಚಿತ್ರ ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಸಾಧು ಕೋಕಿಲ ಸಂಗೀತ ನೀಡಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ್ ನಾಯಕರಾಗಿ ನಟಿಸಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಅವರಿಗೆ ಪ್ರಜ್ಞಾ ನಾಯಕಿಯಾಗಿ ಅಭಿನಯಿಸಿದ್ದಾರೆ.

ದೇವ್ರು ಚಿತ್ರ ತಮಿಳಿನ 'ಥಾಲೈ ನಗರಂ' ಚಿತ್ರದ ರೀಮೇಕ್. ಕತೆಯನ್ನು ಕೊಂಚ ಬದಲಾಯಿಸಿಕೊಂಡು ಕನ್ನ್ನಡಕ್ಕೆ ತಕ್ಕಂತೆ ತೆರೆಗೆ ತರಲಾಗಿದೆ ಎನ್ನುತ್ತಾರೆ ರಾಕ್ ಲೈನ್ ವೆಂಕಟೇಶ್. ಈ ಚಿತ್ರದ ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡಿರುವ ವಿಜಯ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಲಿದ್ದಾರೆ.

ಆಶೀಷ್ ವಿದ್ಯಾರ್ಥಿ, ಓಂಪ್ರಕಾಶ್‌ರಾವ್, ಶೋಭರಾಜ್, ಪಿ.ಎನ್.ಸತ್ಯ, ಸಾಧುಕೋಕಿಲ ಮುಂತಾದವರ ತಾರಬಳಗವಿರುವ ಈ ಚಿತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಅವರು ಕಾಣಿಸಲಿರುವುದು ವಿಶೇಷ.

ಕ್ಲೈಮ್ಯಾಕ್ಸ್ ಸನ್ನಿವೇಶ ಅದ್ಭುತವಾಗಿದ್ದು ಚಿತ್ರದಲ್ಲಿ ವಿಜಯ್ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಪ್ರಜ್ಞಾ ಅವರ ಅಭಿನಯ ಸಹ ಅದ್ಭುತ ಎನ್ನುತ್ತಾರೆ ರಾಕ್ ಲೈನ್. ಜೆ.ಜಿ.ಕೃಷ್ಣ ಛಾಯಾಗ್ರಹಣ, ಜೋನಿ ಹರ್ಷ ಸಂಕಲನ, ತುಷಾರ್ ರಂಗನಾಥ್ ಸಂಭಾಷಣೆ, ರಾಂಶೆಟ್ಟಿ ಹಾಗೂ ಮಾಧು ಸಾಹಸ, ಇಮ್ರಾನ್ ನೃತ್ಯ ಮತ್ತು ಮೋಹನ್ ಪಂಡಿತ್ ಅವರ ಕಲಾ ನಿರ್ದೇಶನ 'ದೇವ್ರು ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada