»   » 'ಕನ್ವರ್ ಲಾಲ್'ನಿರೀಕ್ಷೆಯಲ್ಲಿ ಪ್ರಿಯಾಮಣಿ

'ಕನ್ವರ್ ಲಾಲ್'ನಿರೀಕ್ಷೆಯಲ್ಲಿ ಪ್ರಿಯಾಮಣಿ

Posted By:
Subscribe to Filmibeat Kannada

ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಹಿಟ್ ಚಲನಚಿತ್ರ 'ಅಂತ'. 1981ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನು ಇದೀಗ ಕಿಚ್ಚ ಸುದೀಪ್ 'ಕನ್ವರ್ ಲಾಲ್' ಹೆಸರಿನಲ್ಲಿ ಮತ್ತೊಮ್ಮೆ ರೀಮೇಕ್ ಮಾಡುತ್ತಿರುವುದು ಗೊತ್ತೆ ಇದೆ. ಈ ಚಿತ್ರಕ್ಕೆ ನಟಿ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ 'ಕನ್ವರ್ ಲಾಲ್' ಚಿತ್ರದಿಂದ ತಮಗೆ ಇದುವರೆಗೆ ಯಾವ ಆಹ್ವಾನ ಬಂದಿಲ್ಲ ಎಂದು ಪ್ರಿಯಾಮಣಿ ತಿಳಿಸಿದ್ದಾರೆ.

ಹೊಸ ಗಾನ ಬಜಾನ ಎಂದು ಪುನೀತ್ ಜೊತೆ ಕುಣಿದು ಪಡ್ಡೆಗಳ ನಿದ್ದೆಗೆಡಿಸಿದ್ದ ಪ್ರಿಯಾಮಣಿ ಗಾಂಧಿನಗರದಲ್ಲಿ ಹಬ್ಬಿದ್ದ ಈ ಗಾಸಿಪ್ ಗೆ ಸದ್ಯಕ್ಕೆ ಅಂತ್ಯ ಹಾಡಿದ್ದಾರೆ.ಇದುವರೆಗೆ ಚಿತ್ರಕ್ಕಾಗಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಸದ್ಯಕ್ಕೆ ಗಣೇಶ್ ಜೊತೆ 'ಏನೋ ಒಂಥರಾ' ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದೇನೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆ ಎಂದು ಹೇಳಿದ್ದಾರೆ.

'ರಾಮ್' ಮತ್ತು 'ಏನೋ ಒಂಥರಾ' ಚಿತ್ರಗಳ ನಂತರ ಕನ್ನಡದಲ್ಲಿ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಉತ್ತಮ ಅವಕಾಶಗಳು ಬಂದರೆ ಕನ್ನಡದಲ್ಲಿ ಮತ್ತೆ ನಟಿಸುತ್ತೇನೆ. ಮೊದಲು ಕಥೆ ಕೇಳಿ ನನಗೆ ಇಷ್ಟವಾದರೆ ಮಾತ್ರ ಚಿತ್ರಕ್ಕೆ ಓಕೆ ಹೇಳುತ್ತೇನೆ. 'ಏನೋ ಒಂಥರಾ' ಚಿತ್ರದ ನಂತರ ತೆಲುಗು ಚಿತ್ರವೊಂದಕ್ಕೆ ಸಹಿಯಾಕಿದ್ದೇನೆಎಂದು ಪ್ರಿಯಾಮಣಿ ಹೇಳಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada