»   » ಪವರ್ ಸ್ಟಾರ್ ಪುನೀತ್ ಜೊತೆ ರಾಧಿಕಾ ಪಂಡಿತ್

ಪವರ್ ಸ್ಟಾರ್ ಪುನೀತ್ ಜೊತೆ ರಾಧಿಕಾ ಪಂಡಿತ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಸುವರ್ಣಾವಕಾಶ ರಾಧಿಕಾ ಪಂಡಿತ್ ಪಾಲಾಗಿದೆ. ತಮಿಳಿನ ಯಶಸ್ವಿ 'ನಾಡೋಡಿಗಳ್' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿರುವುದು ಗೊತ್ತೆ ಇದೆ. 'ನಾಡೋಡಿಗಳ್' ಎಂದರೆ ಅಲೆಮಾರಿ ಎಂದರ್ಥ. ದುಡಿಮೆಯನ್ನರಸಿ ಊರೂರು ಅಲೆವ ಯುವ ಪೀಳಿಗೆಯ ನೋವು ನಲಿವುಗಳೇ ಚಿತ್ರದ ಕಥೆ.

ಇದೇ ಮೊದಲ ಬಾರಿಗೆ ಪುನೀತ್ ಜೊತೆ ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಅಭಿನಯಿಸುತ್ತಿರುವುದು ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ನಾಯಕಿ ಪಾತ್ರಕ್ಕೆ ತೀವ್ರ ಹುಡುಕಾಟ ನಡೆಸಿದ ನಿರ್ದೇಶಕ ಮಾದೇಶ್ ಕಡೆಗೆ ರಾಧಿಕಾ ಪಂಡಿತ್ ಗೆ ಅವಕಾಶ ನೀಡಿದ್ದಾರೆ. ಅಂದಹಾಗೆ ಮಾದೇಶ್ ನಿರ್ದೇಶಿಸುತ್ತಿರುವ ನಾಲ್ಕನೆ ರೀಮೇಕ್ ಚಿತ್ರವಿದು.

ಈಗಾಗಲೆ ರಾಧಿಕಾ ಪಂಡಿತ್ 'ಅದ್ದೂರಿ' ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸುವರ್ಣ ವಾಹಿನಿಯ ರಿಯಾಲಿಟಿ ಶೋ 'ಹಳ್ಳಿ ಹೈದ ಪೇಟೆಗೆ ಬಂದ' ಕಾರ್ಯಕ್ರಮದ ನಿರೂಪಕಿಯಾಗಿ ಕಿರುತೆರೆಯಲ್ಲೂ ರಾಧಿಕಾಗೆ ಪುರುಸೊತ್ತಿಲ್ಲದಷ್ಟು ಕೆಲಸವಿದೆ. ಮೂವರು ಯುವಕರ ಸ್ನೇಹ, ಬಿರುಕು ಕುರಿತ ನವಿರಾದ ಕಥೆ ಯನ್ನು ನಾಡೋಡಿಗಳ್ ಚಿತ್ರ ಹೊಂದಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada