»   » ಮಿಸ್ ಕರ್ನಾಟಕ ಸ್ವಾತಿ ಈಗ ಐಟಂ ಡಾನ್ಸರ್

ಮಿಸ್ ಕರ್ನಾಟಕ ಸ್ವಾತಿ ಈಗ ಐಟಂ ಡಾನ್ಸರ್

Posted By:
Subscribe to Filmibeat Kannada

ನಾಯಕಿ ಪಾತ್ರಗಳನ್ನು ಚಿತ್ರನಟಿ ಸ್ವಾತಿ ನಿರೀಕ್ಷಿಸಿದ್ದೇ ಆಯ್ತು. ಕಡೆಗೂ ಅವು ಆಕೆಯನ್ನು ಹುಡುಕಿಕೊಂಡು ಬರಲಿಲ್ಲ. ವಿಧಿಯಿಲ್ಲದೆ ಸ್ವಾತಿ ಪಾಲಿಗೆ ಬಂದಿದ್ದೆ ಪಂಚಾಮೃತ ಎಂದು ತಿಳಿದು ಐಟಂ ಡಾನ್ಸ್ ಗೆ ತಲೆಬಾಗಿದ್ದಾರೆ. ಮಯೂರ್ ಪಟೇಲ್ ಮತ್ತು ದೀಪಿಕಾ ಮುಖ್ಯಭೂಮಿಕೆಯಲ್ಲಿರುವ 'ಹುಂಜ' ಚಿತ್ರಕ್ಕಾಗಿ ಸ್ವಾತಿ ಹೆಜ್ಜೆ ಹಾಕಿದ್ದಾರೆ.

ಮೈಸೂರು ಮೂಲದ ಸ್ವಾತಿ ಕನ್ನಡ ಬೆಳ್ಳಿತೆರೆಗೆ ಅಡಿಯಿಟ್ಟಿದ್ದು 'ವಾರಸ್ದಾರ' ಚಿತ್ರದ ಮೂಲಕ. 'ಮಾದೇಶ' ಚಿತ್ರದಲ್ಲಿ ಬಾರ್ ಗರ್ಲ್ ಪಾತ್ರದಲ್ಲಿ ನಟಿಸಿದ್ದರು. 'ಉಡ' ಚಿತ್ರದ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. 'ಮುರಳಿ'ಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪಾತ್ರ.

ಕಡೆಗೂ ಸ್ವಾತಿಯನ್ನು ಮುಖ್ಯಪಾತ್ರಗಳು ಹುಡುಕಿಕೊಂಡು ಬರಲೆ ಇಲ್ಲ. ಇದೀಗ ಆಕೆ ಐಟಂ ಡಾನ್ಸರ್! ಮಿಸ್ ಕರ್ನಾಟಕ ಪಟ್ಟಧರಸಿ ಸ್ವಾತಿ ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿಯನ್ನು ಪಡೆದಿದ್ದರು. ಆಕೆಯನ್ನು ಮೊದಲು ಗುರುತಿಸಿದ್ದು ಗುರು ದೇಶಪಾಂಡೆ. ನಾಯಕಿಯಾಗಬೇಕೆಂದು ಕನಸು ಸ್ವಾತಿಗೆ ನನಸಾಗಲೇ ಇಲ್ಲ.

ಲಕ ಲಕ ಶಕಲಕ...ರುಕ್ಕು ರುಕ್ಕಮ್ಮ...ಥಕ ಥಕ ಕುಣಿ ಹೊನ್ನಿನ ರಾಣಿ...ಎಂಬ ಹಾಡಿಗೆ ಸ್ವಾತಿ ಹೆಜ್ಜೆ ಹಾಕುತ್ತಿದ್ದರೆ ಛಾಯಾಗ್ರಾಹಕ ಗೌರಿ ವೆಂಕಟೇಶ್ ತಮ್ಮ ಕ್ಯಾಮೆರಾದಲ್ಲಿ ಆಕೆಯ ಹಾವಭಾವಗಳನ್ನು ಸೆರೆಹಿಡಿಯುತ್ತಿದ್ದರು. 'ಹುಂಜ' ಚಿತ್ರದ ಖಳನಟ ಆದಿ ಲೋಕೇಶ್ ಮತ್ತು ಇತರೆ ನೃತ್ಯಗಾರರ ಜೊತೆ ಸ್ವಾತಿ ಹೆಜ್ಜೆ ಹಾಕಿದರು.

ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ 'ಹುಂಜ'ನಿಗೆ ಈಗಾಗಲೆ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಮಯೂರ್ ಪಟೇಲ್ ಮತ್ತು ಆದಿ ಲೋಕೇಶ್ ನಡುವೆ ಮಾರಾಮಾರಿ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಅವಿನಾಶ್, ಮುನಿ, ಅರವಿಂದ್ ಚಿತ್ರದ ತಾರಾಬಳಗದಲ್ಲಿದ್ದಾರೆ.

Please Wait while comments are loading...