»   »  ಚಿತ್ರಮಂದಿರ ತುಂಬಿದೆ; ವೆಂಕಟನ ಸಂಕಟ ಪರಿಹಾರ

ಚಿತ್ರಮಂದಿರ ತುಂಬಿದೆ; ವೆಂಕಟನ ಸಂಕಟ ಪರಿಹಾರ

Subscribe to Filmibeat Kannada

ವೆಂಕಟ ಇನ್ ಸಂಕಟ ಚಿತ್ರ 25 ದಿನಗಳ ಯಶಸ್ವಿ ಪ್ರದರ್ಶನವನ್ನು ಕಂಡಿದ್ದು ರಮೇಶ್ ಅರವಿಂದ್ ರ ಸಂಕಟವನ್ನು ದೂರ ಮಾಡಿದೆ. ಬೆಂಗಳೂರು, ಮಂಗಳೂರು ಮತ್ತು ಮೈಸೂರು ಚಿತ್ರಮಂದಿರಗಳಲ್ಲಿ ವೆಂಕಟ ಇನ್ ಸಂಕಟ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಬಂದ ನಾಲ್ಕನೆಯ ಚಿತ್ರ ಇದಾಗಿದ್ದು ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿದೆ. ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ತುಂಬಿದ ಗೃಹಗಳಲ್ಲಿ ವೆಂಕಟ ಇನ್ ಸಂಕಟ ಪ್ರದರ್ಶನ ಕಾಣುತ್ತಿದೆ.ಮಲ್ಟಿಫ್ಲೆಕ್ಸ್ ಗಳಲ್ಲಿ ನಾಲ್ಕು ಪ್ರದರ್ಶನಗಳಿಂದ ಐದು ಪ್ರದರ್ಶನಗಳಿಗೆ ಹಾಗೂ ಇನ್ನೊಕ್ಸ್ ಚಿತ್ರಮಂದಿರಗಳಲ್ಲಿ 195 ರಿಂದ 295 ಸೀಟುಗಳ ಏರಿಕೆಯನ್ನುಕಂಡಿದೆ. ವೆಂಕಟ ಇನ್ ಸಂಕಟ ಉತ್ತಮ ವಿಮರ್ಶೆಗೆ ಪಾತ್ರವಾಗಿರುವುದೇ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಎನ್ನುತ್ತಾರೆ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್.

ಬೇಸಿಗೆ ರಜೆಗಳು ಆರಂಭವಾಗುತ್ತಿದ್ದಂತೆ ವೆಂಕಟ ಇನ್ ಸಂಕಟನ ಪ್ರಿಂಟ್ ಗಳ ಸಂಖ್ಯೆಯೂ 28ಕ್ಕೆ ಏರಿಕೆಯಾಗಿದೆ. ವೆಂಕಟ ಅರ್ಧ ಶತಕ ಬಾರಿಸುವ ಶುಭದಿನಕ್ಕಾಗಿ ರಮೇಶ್ ಅರವಿಂದ್ ಕಾತುರದಿಂದ ಕಾಯುತ್ತಿದ್ದಾರೆ. ಅಂದೇ ಅವರು ಹೊಸ ಚಿತ್ರಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಗೆ ರಮೇಶ್ ಹಾಗೂ 'ವೆಂಕಟ' ಚಿತ್ರದ ನಿರ್ಮಾಪಕರು ಬೆರಗಾಗಿದ್ದಾರೆ.

ವೆಂಕಟ ಇನ್ ಸಂಕಟ 25 ದಿನಗಳನ್ನು ಪೂರೈಸಿರುವ ಸಿಹಿ ನೆನಪುಗಳನ್ನು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹಂಚಿಕೊಳ್ಳಲಾಯಿತು. ಹಿರಿಯ ನಟರಾದ ಉಮೇಶ್, ಕರಿಬಸವಯ್ಯ, ಭಾಸ್ಕರ್ ರಾವ್ ಸೇರಿದಂತೆ ನಟಿ ಮೇಘನಾ ಸೇರಿದಂತೆ ವೆಂಕಟ ಇನ್ ಸಂಕಟ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹಾಸ್ಯದ ಸುನಾಮಿ ಉಕ್ಕಿಸುವ ವೆಂಕಟ ಇನ್ ಸಂಕಟ (ವಿಮರ್ಶೆ)
ಮಳೆ ನೃತ್ಯದಿಂದ ವೆಂಕಟನ ಗೆದ್ದ ಶರ್ಮಿಳಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada