»   » ತೆಲುಗು 'ಆಪ್ತರಕ್ಷಕ'ನಿಗೆ ಕೋಮಲ್ ಕಾಮಿಡಿ

ತೆಲುಗು 'ಆಪ್ತರಕ್ಷಕ'ನಿಗೆ ಕೋಮಲ್ ಕಾಮಿಡಿ

Posted By:
Subscribe to Filmibeat Kannada

'ಆಪ್ತರಕ್ಷಕ' ತೆಲುಗು ರೀಮೇಕ್ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದೆ. ಈ ಹಿಂದೆ ತೆಲುಗುಆಪ್ತರಕ್ಷಕ ಚಿತ್ರಕ್ಕೆ ವೆಂಕಟೇಶ್ ನಾಯಕ ನಟ ಎನ್ನಲಾಗಿತ್ತು. ಆದರೆ ಈಗ ಅದೆಲ್ಲಾ ಉಲ್ಟಾ ಆಗುವ ಸಾಧ್ಯತೆ ಇದೆ. 'ಆಪ್ತರಕ್ಷಕ' ತೆಲುಗು ರೀಮೇಕ್ ಚಿತ್ರದಲ್ಲಿ ದಿವಂಗತ ಎನ್ಟಿಆರ್ ಮಗ ಬಾಲಕೃಷ್ಣ ನಟಿಸಲಿದ್ದಾರೆ ಎಂಬುದು ಹೊಸ ಸುದ್ದಿ. ಹಾಗೆಯೇ ಚಿತ್ರಕ್ಕೆ 'ಆಪ್ತರಕ್ಷಕುಡು' ಎಂದು ಹೆಸರಿಡುವ ಬಗ್ಗೆ ಚಿಂತನೆ ನಡೆದಿದೆ. ಮತ್ತೊಂದು ಗಮ್ಮತ್ತಿನ ಸುದ್ದಿ ಅಂದ್ರೆ, 'ಆಪ್ತರಕ್ಷಕುಡು' ಚಿತ್ರದಲ್ಲಿ ಕೋಮಲ್ ಅಭಿನಯಿಸಲಿದ್ದಾರೆ ಎಂಬುದು!

ಸಾಮಾಜಿಕ ಪಾತ್ರಗಳಿಗಿಂತಲೂ ಹೆಚ್ಚಾಗಿ ಪೌರಾಣಿಕ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ನಟ ಬಾಲಕೃಷ್ಣ.'ಆಪ್ತರಕ್ಷಕ' ನಿರ್ದೇಶಕ ಪಿ ವಾಸು ಅವರಿಗೂ ಎನ್ಟಿಆರ್ ಕುಟುಂಬದವರೊಂದಿಗೆ ಅವಿನಾಭಾವ ಸಂಬಂಧವಿದೆ. ಪಿ ವಾಸು ಅವರ ತಂದೆ ಪೀತಾಂಬರಂ ಅವರು ಎನ್ಟಿಆರ್ ಗೆ ಮೇಕಪ್ ಮ್ಯಾನ್ ಕೆಲಸ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಬಾಲಕೃಷ್ಣ ಅವರಿಗೆ 'ಆಪ್ತರಕ್ಷಕುಡು' ಪಾತ್ರ ಸಿಗುವ ಅವಕಾಶಗಳು ಹೆಚ್ಚಾಗಿವೆ.

ತೆಲುಗು ಆಪ್ತರಕ್ಷಕಡು ಚಿತ್ರದಲ್ಲಿ ಹಾಸ್ಯನಟ ಕೋಮಲ್ ಕುಮಾರ್ ಸಹ ಸ್ಥಾನ ಪಡೆಯಲಿದ್ದಾರೆ ಎನ್ನುತ್ತವೆ ಮೂಲಗಳು. ಆಪ್ತರಕ್ಷಕ ಚಿತ್ರ ಯಶಸ್ವಿಯಾದ ಬಳಿಕ ಪಿ ವಾಸು ಮಾತನಾಡುತ್ತಾ, ನೀನು ಮತ್ತು ನಾನು ರಾಮ ಮತ್ತು ಆಂಜನೇಯ ಇದ್ದಹಾಗೆ. ರಾಮ ಎಲ್ಲಿರುತ್ತಾನೊ ಆಂಜನೇಯನೂ ಅಲ್ಲೆ ಇರುತ್ತಾನೆ ಎಂದು ಕೋಮಲ್ ಬಗ್ಗೆ ಮಾರ್ಮಿಕವಾಗಿ ನುಡಿದ್ದರು. ಕೋಮಲ್ ಸಹ ಮೌನವಾಗಿ ಎಲ್ಲಾ ತಮ್ಮಿಚ್ಛೆ ಎಂದಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada