»   » ಕರಾಟೆ ರಾಣಿ ಆಯೇಷಾಗೆ 'ಜಯಹೇ'

ಕರಾಟೆ ರಾಣಿ ಆಯೇಷಾಗೆ 'ಜಯಹೇ'

Posted By:
Subscribe to Filmibeat Kannada

'ಜಯಹೇ' ಚಿತ್ರದಲ್ಲಿ ಕರಾಟೆ ರಾಣಿ ಆಯೇಷಾ ಮೈನವಿರೇಳಿಸುವ ಸಾಹಸವನ್ನು ಮಾಡಿ ಥ್ರಿಲ್ಲರ್ ಮಂಜುರನ್ನು ಬೆಚ್ಚಿಬೀಳಿಸಿದ್ದಾರೆ! ಸಂಪೂರ್ಣ ಸಾಹಸ ಪ್ರಧಾನ ಚಿತ್ರವಾದ ಜಯಹೇ ಚಿತ್ರವನ್ನು ಥ್ರಿಲ್ಲರ್ ಮಂಜು ನಿರ್ದೇಶಿಸುತ್ತಿರುವುದು ಗೊತ್ತೆ ಇದೆಯಲ್ಲ. ಚಿಕ್ಕಂದಿನಿಂದಲೇ ಆಯೇಷಾ ಕರಾಟೆ ಅಭ್ಯಾಸ ಮಾಡುತ್ತಿದ್ದು ಇದೀಗ ಹಲವು ಮಂದಿಗೆ ತರಬೇತಿ ನೀಡುತ್ತಿದ್ದಾರೆ.ಈ ಹಿಂದೆ ಕನ್ನಡದ 'ಶಬ್ದ' ಎಂಬ ಚಿತ್ರದಲ್ಲೂ ಆಯೇಷಾ ಅಭಿನಯಿಸಿದ್ದರಂತೆ.

ಮುಸ್ಲಿಂ ಸಮುದಾಯದಲ್ಲಿನ ಬಿಗಿ ಕಟ್ಟುಪಾಡುಗಳು ಆಯೇಷಾರ ಕರಾಟೆಗೆ ಅಡ್ಡಿಯಾಗಿಲ್ಲ. ಆಕೆ ಇದುವರೆಗೂ ಬುರ್ಕಾ ಧರಿಸಿಲ್ಲವಂತೆ. ಅವರ ಮನೆಯಲ್ಲು ಯಾರು ಬುರ್ಕಾ ಧರಿಸುವುದಿಲ್ಲವಂತೆ. ಆಯೇಷಾ ತಂದೆ ಹೋಟೆಲ್ ಉದ್ಯಮಿಯಾಗಿದ್ದು ತಾಯಿ ಮನೆವಾರ್ತೆ ನೋಡಿಕೊಳ್ಳುತ್ತಾರೆ.ಆಯೇಷಾಗೆ ಒಬ್ಬ ತಂಗಿ ಮತ್ತು ಒಬ್ಬ ತಮ್ಮ ಇದ್ದಾರೆ. ಮೂಲತಃ ಆಂಧ್ರದವರು.

''ಮದುವೆಯಾದ ಬಳಿಕ ನಮ್ಮ ತಾಯಿ ಬುರ್ಕಾ ಧರಿಸುವುದನ್ನು ಬಿಟ್ಟುಬಿಟ್ಟರು. ನನಗೂ ಅಷ್ಟೆ ಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಧರ್ಮಕ್ಕಿಂತಲೂ ಹೆಚ್ಚಾಗಿ ಮಾನವೀಯತೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ಮುಸ್ಲಿಂರ ಪವಿತ್ರ ಗ್ರಂಥ ಖುರಾನ್ ಹೇಳುವುದು ಇದನ್ನೆ ಅಲ್ಲವೆ ಎನ್ನುತ್ತಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಮಹಿಳೆಯರು ಇಂದು ಹೆಚ್ಚಾಗಿಕರಾಟೆ ಕಲಿಲು ಬರುತ್ತಿದ್ದಾರೆ''ಎನ್ನುತ್ತಾಳೆ ಕರಾಟೆ ರಾಣಿ.

ಕರಾಟೆ ಪಟುವಾದ ಕಾರಣ 'ಜಯಹೇ' ಚಿತ್ರದಲ್ಲಿ ನಟಿಸುವುದು ಸುಲಭವಾಯಿತು. ಆದರೆ ಸಿನಿಮಾ ಸ್ಟಂಟ್ ಗಳು ಮಾತ್ರ ಭಿನ್ನ ಎನ್ನುತ್ತಾರೆ. ಸದ್ಯಕ್ಕೆ ಆಯೇಷಾ ಅಂತಿಮ ವರ್ಷದ ಬಿಂ.ಕಾಂ ವಿದ್ಯಾರ್ಥಿನಿ. ತಿರುಪತಿ ಮೂಲದ ಆಯೇಷಾ ಆಗಾಗ ತಿಮ್ಮಪ್ಪನ ದರ್ಶನಕ್ಕೂ ಹೋಗುತ್ತಾರಂತೆ. ಬಹಳಷ್ಟು ಮುಸ್ಲಿಂರು ತಿರುಪತಿಗೆ ಭೇಟಿ ಕೊಡುವುದನ್ನು ಆಕೆ ಕಂಡಿದ್ದಾರಂತೆ. ಕನ್ನಡಲ್ಲಿ ಸದ್ಯಕ್ಕೆ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿದೆ. ಮಾಲಾಶ್ರೀ ಮತ್ತು ತೆಲುಗಿನ ವಿಜಯಶಾಂತಿ ನನ್ನ ರೋಲ್ ಮಾಡೆಲ್ಸ್ ಎನ್ನ್ನುತ್ತಾರೆ ಆಯೇಷಾ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada