»   »  ಲವರ್ ಬಾಯ್ ಪಾತ್ರಗಳಿಗೆ ಗಣೇಶ್ ವಿದಾಯ!

ಲವರ್ ಬಾಯ್ ಪಾತ್ರಗಳಿಗೆ ಗಣೇಶ್ ವಿದಾಯ!

Subscribe to Filmibeat Kannada
ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ 2008 ಬಹಳಷ್ಟು ಕಹಿ ನೆನಪುಗಳನ್ನು ಕೊಟ್ಟ ವರ್ಷ. 2008ರಲ್ಲಿ ಗಣೇಶ್ ನಟಿಸಿದ್ದ ಎಲ್ಲ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸಲಿಲ್ಲ.ಬಹಳಷ್ಟು ನಿರೀಕ್ಷೆಯ ಸರ್ಕಸ್ ಚಿತ್ರ ಸಹ ಸೋತಿತು. ಇದರಿಂದ ಗಣೇಶ್ ರ ಸ್ಟಾರ್ ಗಿರಿ ಕೊಂಚ ಮಂಕಾಗಿದೆ.

ಗಣೇಶ್ ರ ಲವರ್ ಬಾಯ್ ಪಾತ್ರಗಳನ್ನು ಪ್ರೇಕ್ಷಕ ಸಾರಾಸಗಟಾಗಿ ನಿರಾಕರಿಸಿದ್ದಾನೆ. ಹಾಗಾಗಿ 2009ರಲ್ಲಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಗಣೇಶ್. ಅಂದರೆ ಲವರ್ ಬಾಯ್ ಪಾತ್ರಗಳಿಗೆ ವಿದಾಯ ಹೇಳಲಿದ್ದಾರೆ. ಇನ್ನೇನಿದ್ದರೂ ಬೋಲ್ಡ್ ಪಾತ್ರಗಳ ಕಡೆಗೆ ಗಣೇಶ್ ಒಲವು.

ಗಣೇಶ್ ಅಭಿನಯಿಸುತ್ತಿರುವ ಮುಂದಿನ ಚಿತ್ರ 'ಹುಡುಗ ಹುಡುಗಿ'ಯಲ್ಲೂ ಅವರದು ಬೋಲ್ಡ್ ಪಾತ್ರವಂತೆ. ಮೇ ತಿಂಗಳಲ್ಲಿ ಹುಡುಗ ಹುಡುಗಿ ಚಿತ್ರೀಕರಣ ಆರಂಭವಾಗಲಿದ್ದು ಕ್ರೀಡಾಚಿತ್ರಕತೆಯನ್ನು ಒಳಗೊಂಡಿದೆಯಂತೆ. ಈ ಹಿಂದಿನ ಯಾವುದೇ ಚಿತ್ರದಲ್ಲೂ ತಾವು ಈ ರೀತಿಯ ಪಾತ್ರ ಮಾಡಿಲ್ಲ. ಇದೊಂದು ವಿಶಿಷ್ಟವಾದ ಪಾತ್ರ ಎಂದು ಬೋಲ್ಡಾಗಿ ಹೇಳುತ್ತಾರೆ ಗಣೇಶ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಚಿತ್ರವಿಮರ್ಶೆ: ಗಣೇಶ್ ,ರಮ್ಯಾರ ಬೊಂಬಾಟ್!
ಗೋಲ್ಡನ್ ಸ್ಟಾರ್ ಗಣೇಶ್; ಚಾಪ್ಲಿನ್ ಆದಾಗ
ನಿರ್ಮಾಪಕನಾಗಿ ಗೋಲ್ಡನ್ ಸ್ಟಾರ್ ಗಣೇಶ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada