»   »  ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗಣೇಶ್!

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗಣೇಶ್!

Posted By:
Subscribe to Filmibeat Kannada
Indrajit Lankesh directs Ganesh
ನೈಸ್ ಖೇಣಿ ಜತೆ ಒಂದು ವರ್ಷಕ್ಕೂ ಅಧಿಕ ಕಾಲ ಗುದ್ದಾಡಿದ ಬಳಿಕ ಇಂದ್ರಜಿತ್ ಲಂಕೇಶ್ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಗಣೇಶ್ ಅಭಿನಯದಲ್ಲಿ 'ಹುಡುಗ ಹುಡುಗಿ' ಎಂಬ ಅಪ್ಪಟ ಪ್ರೇಮಕತೆಯನ್ನು ಇಂದ್ರಜಿತ್ ಆಯ್ದುಕೊಂಡಿದ್ದಾರೆ.

ನಿರ್ಮಾಪಕ ಕೆ.ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಅವರು ಇಂದ್ರಜಿತ್ ನಿರ್ದೇಶದ 'ಲಂಕೇಶ್ ಪತ್ರಿಕೆ' ಹಾಗೂ ಗಣೇಶ್ ರ 'ಅರಮನೆ' ಚಿತ್ರಗಳನ್ನು ನಿರ್ಮಿಸಿದ್ದರು. ಹಾಗಾಗಿ ಈ ಇಬ್ಬರೊಂದಿಗೂ ಕೆಲಸ ಮಾಡಿದ ಅನುಭವ ಕೆ.ಮಂಜು ಅವರಿಗಿದೆ. 'ಹುಡುಗ ಹುಡುಗಿ' ಚಿತ್ರ ಏಪ್ರಿಲ್ 20ರಿಂದ ಪ್ರಾರಂಭವಾಗುವ ಸಾಧ್ಯತೆಗಳಿವೆ.

ಗಣೇಶ್ ಅಭಿನಯದಲ್ಲಿ ಚಿತ್ರವನ್ನು ನಿರ್ದೇಶಿಸಬೇಕು ಎಂಬುದು ಇಂದ್ರಜಿತ್ ರ ಬಹಳ ದಿನಗಳ ಕನಸು. ಈ ಹಿಂದೆ ಇಂದ್ರಜಿತ್ ನಿರ್ದೇಶನದ 'ಎಲ್ಲಾ ಓಕೆ ಮದುವೆ ಯಾಕೆ'(ಹಿಂದಿಯ 'ಶಾದಿ ಕೆ ಆಫ್ಟರ್ ಎಫೆಕ್ಟ್ಸ್ 'ರೀಮೇಕ್) ಚಿತ್ರದ ಹಾಡೊಂಡದರಲ್ಲಿ ಗಣೇಶ್ ಅತಿಥಿ ನಟನಾಗಿ ಅಭಿನಯಿಸಿದ್ದರು. ಈಗ ಇವರಿಬ್ಬರೂ ಒಂದಾಗುವ ಅವಕಾಶವನ್ನು ನಿರ್ಮಾಪಕ ಕೆ.ಮಂಜು ಕಲ್ಪಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಂಧನದ ಹಿಂದೆ ರಾಜಕೀಯ ದುರುದ್ದೇಶ : ಇಂದ್ರಜಿತ್
ನೈಸ್ ರೋಡಿನಲ್ಲಿ ಜಾರಿದರೆ ಇಂದ್ರಜಿತ್?
ಬಣ್ಣದ ಲೋಕದ ಇಂದ್ರಛಾಪ ಇಂದ್ರಜಿತ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada