»   »  ಮಡೋನ್ನಾರ ಯೋಗ ಗುರು ಜೋಯೀಸ್ ಇನ್ನಿಲ್ಲ

ಮಡೋನ್ನಾರ ಯೋಗ ಗುರು ಜೋಯೀಸ್ ಇನ್ನಿಲ್ಲ

Posted By:
Subscribe to Filmibeat Kannada
Ashtanga Yoga Guru Pattabhi Jois
ಅಷ್ಟಾಂಗ ಯೋಗದ ಖ್ಯಾತ ಗುರು ಕೆ ಪಟ್ಟಾಭಿ ಜೋಯೀಸ್ ಅವರು ಮೈಸೂರಿನಲ್ಲಿ ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 94 ವರ್ಷ ವಯಸ್ಸಾಗಿತ್ತು.

ಜೋಯಿಸ್ ಅವರ ಮಹತ್ತರ ಸಾಧನೆ ಎಂದರೆ ಹಾಲಿವುಡ್ ನ ಬಹುತೇಕ ತಾರೆಯರಿಗೆ ಯೋಗ ಕಲಿಸಿದ್ದು. ಹಾಲಿವುಡ್ ನ ಖ್ಯಾತೆ ತಾರೆಗಳಾದ ಮಡೋನ್ನಾ ಮತ್ತು ಗ್ವಿನಿತ್ ಪಾಲ್ ತ್ರೊ ಇವರ ಶಿಷ್ಯರಾಗಿದ್ದರು. ಪಟ್ಟಾಭಿ ಜೋಯಿಸರು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ಅಷ್ಟಾಂಗ ಯೋಗವನ್ನು ಇಡೀ ಜಗತ್ತ್ತಿಗೆ ಪರಿಚಯಿಸಿದ ಖ್ಯಾತಿ ಜೋಯಿಸ್ ಅವರದು.

ಮೈಸೂರಿನ ಗೋಕುಲಂನಲ್ಲಿರುವ ಅವರ ಮನೆ ಪ್ರಮುಖ ಆಕರ್ಷಣೆಯಾಗಿತ್ತು. ಒಲಂಪಿಕ್ ಕ್ರೀಡಾ ಗ್ರಾಮಕ್ಕೆ ಬರುವ ವಿದೇಶಿಯರು ಜೋಯೀಸರ ಮನೆಗೆ ತಪ್ಪದೆ ಭೇಟಿ ಕೊಡುತ್ತಿದ್ದರು. ತಮ್ಮ 12ನೇ ವರ್ಷಕ್ಕೆ ಜೋಯೀಸರು ಮಾಧ್ಯಮಿಕ ಶಾಲೆಯಲ್ಲಿ ಯೋಗ ಪ್ರದರ್ಶನ ನೀಡಿದ್ದದ್ದು ವಿಶೇಷ. 1964ರಲ್ಲಿ ಇವರ ಬಳಿ ಯೋಗ ಕಲಿತ ಆಂಡ್ರೆ ವಾನ್ ಲಿಸ್ ಬೆತ್ ಅವರು ಮೊದಲ ವಿದೇಶಿಯರು.

ಆನಂತರ ಜೋಯೀಸರ ಬಳಿ ಯೂರೋಪಿನ ಬಹಳಷ್ಟು ಮಂದಿ ಯೋಗ ಕಲಿಯಲು ಆಗಮಿಸಿದ್ದರು. ಎಪ್ಪತರ ದಶಕದಲ್ಲಿ ಅಮೆರಿಕ, ಕ್ಯಾಲಿಫೋರ್ನಿಯಾ, ಹವಾಯಿ ದೇಶಗಳಲ್ಲಿ ಅಷ್ಟಾಂಗ ಯೋಗ ಜನಪ್ರಿಯವಾಯಿತು. ನಂತರದ 25 ವರ್ಷಗಳಲ್ಲಿ ಫ್ರಾನ್ಸ್, ಜರ್ಮನಿ, ರಷ್ಯಾ, ಇಸ್ರೇಲ್, ಚಿಲಿ, ಇಂಗ್ಲೆಂಡ್, ಇಟಲಿ, ಸ್ಪೈನ್, ಸ್ವಿಡ್ಜರ್ ಲ್ಯಾಂಡ್, ಕೆನಡಾ, ಆಸ್ಟ್ರಿಯಾ, ನ್ಯೂಜಿಲ್ಯಾಂಡ್ ದೇಶಗಳಿಗೆ ವಿಸ್ತರಿಸಿತು. ಜೋಯೀಸರ ಪುತ್ರರಲ್ಲಿ ಒಬ್ಬರಾದ ಮಂಜು ಅವರು ಅಮೆರಿಕಾದಲ್ಲಿ ಅಷ್ಟಾಂಗ ಯೋಗವನ್ನು ಕಲಿಸುತ್ತಿದ್ದಾರೆ. ಅವರ ಮಗಳು ಮತ್ತು ಮೊಮ್ಮಗ ಶರತ್ ರಂಗಸ್ವಾಮಿ ಮೈಸೂರಿನಲ್ಲಿ ಯೋಗವನ್ನು ಕಲಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada