»   »  ದೇವರು ಕೊಟ್ಟ ತಂಗಿ ಮೊದಲ ಹಂತ ಪೂರ್ಣ

ದೇವರು ಕೊಟ್ಟ ತಂಗಿ ಮೊದಲ ಹಂತ ಪೂರ್ಣ

Subscribe to Filmibeat Kannada

ತಂಗಿ ಸೆಂಟಿಮೆಂಟ್ ಚಿತ್ರಗಳನ್ನು ಕೊಟ್ಟ ಸಾಯಿಪ್ರಕಾಶ್ ಇದೀಗ ತಾವೇ ನಿರ್ಮಾಪಕರಾಗಿ ನಿರ್ದೇಶಿಸುತ್ತಿರುವ ' ದೇವರು ಕೊಟ್ಟ ತಂಗಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ತಂಗಿಯಾಗಿ ಮೀರಾ ಜಾಸ್ಮಿನ್ ಅಭಿನಯಿಸುತ್ತಿದ್ದಾರೆ. ಇದು ಕೂಡ ಸಂಪೂರ್ಣ ಗ್ರಾಮೀಣ ಕಥೆಯಾಗಿದ್ದು ಸಂಭಾಷಣೆಗಳನ್ನು ಬಿ ಎ ಮಧು ಅವರು ಬರೆದಿದ್ದಾರೆ.

ಕಳೆದ ತಿಂಗಳು ಆರಂಭವಾದ ಶೂಟಿಂಗ್ ಘಾಟಿ ಸುಬ್ರಮಣ್ಯ, ಶಿಂಶಾ ಜಲಪಾತ, ಅಲ್ಲದೆ ಚನ್ನಪಟ್ಟಣ ಮತ್ತು ಬಿಡದಿ ಮುಂತಾದ ಸ್ಥಳಗಳಲ್ಲಿ 12 ದಿನಗಳ ಕಲ ಕೌರವ ವೆಂಕಟೇಶ್ ಅವರ ಸಾಹಸ ಸಂಯೋಜನೆಯಲ್ಲಿ 3 ಹೊಡೆದಾಟ ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು.

ಮಾತಿನ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸಿ 30 ದಿನಗಳಲ್ಲಿ ಹಾಡು ಅಲ್ಲದೆ ಉಳಿದ ಭಾಗವನ್ನು ಮುಗಿಸಲಾಗುವುದು ಎಂದು ನಿರ್ಮಾಪಕ ಕಂ ನಿರ್ದೇಶಕ ಸಾಯಿ ಪ್ರಕಾಶ್ ತಿಳಿಸಿದ್ದಾರೆ. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಚಿತ್ರಕ್ಕಿದೆ. ಆರ್ ಗಿರಿ ಅವರ ಛಾಯಾಗ್ರಹಣವಿದೆ. ಮೋನಿಕಾ, ಸುರಾಜ್, ಲಕ್ಷ್ಮೀದೇವಿ, ಸಾಧುಕೋಕಿಲ ಪ್ರಮುಖ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada