»   »  ರಮ್ಯಾ ಬಾರ್ನ ಎಂಬ ಕೊಡಗಿನ ಬೆಡಗಿ

ರಮ್ಯಾ ಬಾರ್ನ ಎಂಬ ಕೊಡಗಿನ ಬೆಡಗಿ

Subscribe to Filmibeat Kannada
ಕನ್ನಡ ಚಿತ್ರರಂಗಲ್ಲಿ ಆಮದು ಬೆಡಗಿಯ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಪ್ಪಟ ಕನ್ನಡ ನಟಿಯರ ಗಂಧ ಗಾಳಿಯಿಲ್ಲದೆ ಗಾಂಧಿನಗರ ಗವ್ವೆನ್ನುತ್ತಿದೆ. ಅದೇ ಹಳಸಲು ಮುಖಗಳನ್ನು ನೋಡಿ ನೋಡಿ ಪ್ರೇಕ್ಷಕರು ಸೊರಗಿ ಸೋರೇಕಾಯಿ ಆಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮರಳುಗಾಡಿನ ಓಯಸ್ಸಿನಂತೆ ರಮ್ಯಾ ಬಾರ್ನ ಬಂದಿದ್ದಾರೆ.

ರಮ್ಯಾ ಬಾರ್ನ ಅಪ್ಪಟ ಕೊಡಗಿನ ಬೆಡಗಿ. ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನ ದ್ವಿತೀಯ ಪ್ರವಾಸೋದ್ಯಮ ಪದವಿಯ ಜಾಣ ವಿದ್ಯಾರ್ಥಿನಿ! 'ನೀನ್ಯಾರೆ?' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿ ಚಿತ್ರರಸಿಕರ ಗಮನ ಸೆಳೆದು ತಾನ್ಯಾರೆಂದು ತೋರಿಸಿದ ನಟಿ. ಅಂದಹಾಗೆ ರಮ್ಯಾ ಬಾರ್ನ ಅವರ ತಂದೆ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಎಂಬ ಸಣ್ಣ ಮಾಹಿತಿನಿಮ್ಮ ಕುತೂಹಲಕ್ಕಿರಲಿ!

ಪ್ರಸ್ತುತ ರಮ್ಯಾ ಬಾರ್ನೆ 'ನನ್ನೆದೆಯ ಹಾಡು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಮತ್ತೊಬ್ಬ ನಟಿ ರಮ್ಯಾ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತೆರವಾಗಿದ್ದ ರಮ್ಯಾ ಸ್ಥಾನವನ್ನು ರಮ್ಯಾ ಬಾರ್ನೆ ತುಂಬಿದ್ದಾರೆ. ಆಮದು ನಟಿಯರ ನಡುವೆ ರಮ್ಯಾ ಬಾರ್ನ, ಶುಭ ಪುಂಜ..ಮುಂತಾದ ಕನ್ನಡ ನಟಿಯರು ಹೊಸ ನಕ್ಷತ್ರಗಳಂತೆ ಮಿಂಚುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ನನ್ನೆದೆಯ ಹಾಡಿಗೆ ಸೆನ್ಸಾರ್ ನಿಂದ ಮೆಚ್ಚುಗೆ
ನೀನ್ಯಾರೆ ಎತ್ತಂಗಡಿಯಿಂದ ನಿರ್ಮಾಪಕ ಗರಂ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada