»   » ಹ್ಯಾಟ್ರಿಕ್ ಹೀರೋ ಶಿವಣ್ಣನ 'ಮೈಲಾರಿ' ಟ್ರೈಲರ್

ಹ್ಯಾಟ್ರಿಕ್ ಹೀರೋ ಶಿವಣ್ಣನ 'ಮೈಲಾರಿ' ಟ್ರೈಲರ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಅದ್ದೂರಿ ಚಿತ್ರ 'ಮೈಲಾರಿ'. ಈ ಚಿತ್ರ ಶೀರ್ಷಿಕೆ ವಿವಾದ ಹಾಗೂ ಶಿವಣ್ಣನ ಸಂಭಾವನೆಗೆ ಸಂಬಂಧಿಸಿದಂತೆ ಬಹು ಚರ್ಚಿತ ಚಿತ್ರವೂ ಹೌದು. 'ಮೈಲಾರಿ' ಚಿತ್ರದ ಸ್ಥಿರಚಿತ್ರಗಳನ್ನು ನೋಡಿದರೆ ಇದೊಂದು ಮಾಸ್ ಚಿತ್ರ ಅನ್ನಿಸದೆ ಇರದು.

'ಮೈಲಾರಿ' ಚಿತ್ರದ ಮೂಲಕ ಶಿವಣ್ಣ ಮತ್ತೆ ಮಚ್ಚು ಹಿಡಿದಿರುವುದನ್ನು ಗ್ಯಾಲರಿಯಲ್ಲಿ ನೋಡಬಹುದು! ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವುದು ತಾಜ್ ಮಹಲ್ ಖ್ಯಾತಿಯ ಆರ್ ಚಂದ್ರು. ಗುರುಕಿರಣ್ ಅವರ ಸಂಗೀತ, ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ಚಿತ್ರಕ್ಕಿದೆ.

ಮೈಲಾರಿ ಚಿತ್ರದ ಟ್ರೈಲರ್

ಈ ಚಿತ್ರದ ಮೂಲಕ ಶಿವರಾಜ್ ಕುಮಾರ್ ಗೆ ಮೋಹಕ ತಾರೆ ಸದಾ ಜೊತೆಯಾಗುತ್ತಿದ್ದಾರೆ. ತಾರಾಗಣದಲ್ಲಿ ರವಿ ಕಾಳೆ, ರಂಗಾಯಣ ರಘು, ಗುರುಪ್ರಸಾದ್, ಜಾನ್ ಕೋಹಿನ್, ಸುರೇಶ್ ಮಂಗಳೂರು, ಯಶಸ್, ನಾಗರಾಜ್, ಬುಲೆಟ್ ಪ್ರಕಾಶ್ ಮುಂತಾದವರು ಇದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada