ಸುದೀಪ್ ಆಕ್ಷನ್, ಕಟ್‌ನಲ್ಲಿ ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ನಟ, ನಿರ್ದೇಶಕ ಸುದೀಪ್ ಆಕ್ಷನ್, ಕಟ್ ಹೇಳಲಿದ್ದಾರೆ. ಇನ್ನೂ ಹೆಸರಿಡ ಈ ಚಿತ್ರ ಏಪ್ರಿಲ್ 2011ರಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ಶಿವಣ್ಣನ ಜೊತೆ ಲೂಸ್ ಮಾದ ಯೋಗೇಶ್ ಸಹ ಅಭಿನಯಿಸಲಿದ್ದಾರೆ ಎಂದು ಸುದೀಪ್ ತಿಳಿಸಿದ್ದಾರೆ.
ಅಂದಹಾಗೆ ಈ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ, ಕೇವಲ ಅವರು ಆಕ್ಷನ್, ಕಟ್ ಹೇಳಲಿದ್ದಾರೆ. ನಿಜ ಜೀವನದ ಘಟನೆಯೊಂದನ್ನು ಆಧರಿಸಿ ಸುದೀಪ್ ಮತ್ತು ಕೆ ನಂಜುಂಡ ಚಿತ್ರಕಥೆ ಹೆಣೆದಿದ್ದಾರೆ. ಸದ್ಯಕ್ಕೆ 'ಕೆಂಪೇಗೌಡ' ಚಿತ್ರವನ್ನು ಸುದೀಪ್ ನಿರ್ದೇಶಿಸುತ್ತಿದ್ದಾರೆ.
ಈಗಾಗಲೆ ಬಿಡುಗಡೆಗೊಂಡಿರುವ 'ಕಿಚ್ಚ ಹುಚ್ಚ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ವೀರ ಪರಂಪರೆ' ಚಿತ್ರವೂ ಬಿಡುಗಡೆಗೆ ಅಣಿಯಾಗಿದೆ. ಈಗ ಶಿವಣ್ಣನ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಾರೆ ಎಂದರೆ ಅತ್ತ ಶಿವಣ್ಣ ಇತ್ತ ಸುದೀಪ್ ಅಭಿಮಾನಿಗಳಿಗೆ ಸಂಭ್ರಮದ ವಿಷಯ.
ಸುದೀಪ್ ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ಕಿಚ್ಚ ಹುಚ್ಚ ಯೋಗೇಶ್ sudeep shiva rajkumar yogish hat trick hero kichcha huchcha


Click it and Unblock the Notifications