»   » ಜೈಜಗದೀಶ್, ಸುಹಾಸಿನಿ ಜೋಡಿ ಮತ್ತೆ ಬೆಳ್ಳಿತೆರೆಗೆ!

ಜೈಜಗದೀಶ್, ಸುಹಾಸಿನಿ ಜೋಡಿ ಮತ್ತೆ ಬೆಳ್ಳಿತೆರೆಗೆ!

Posted By:
Subscribe to Filmibeat Kannada

ವಿಷ್ಣುವರ್ಧನ್ ಅಭಿನಯದ 'ಬಂಧನ' ಚಿತ್ರದಲ್ಲಿ ಸುಹಾಸಿನಿ ಮತ್ತು ಜೈ ಜಗದೀಶ್ ಗಂಡ ಹೆಂಡತಿಯಾಗಿ ಅಮೋಘ ಅಭಿನಯ ನೀಡಿದ್ದರು. 'ಬಂಧನ' ಚಿತ್ರದ ''ಈ ಬಂಧನಾ ಜನುಮ ಜನುಮದ ಅನುಬಂಧನ...'' ಹಾಡು ಕೇಳಿದರೆ ಇಂದಿಗೂ ಪ್ರೇಕ್ಷಕರು ಪುಳಕಗೊಳ್ಳುತ್ತಾರೆ. ಸುಹಾಸಿನಿ ಮತ್ತು ಜೈಜಗದೀಶ್ ಕಾಂಬಿನೇಷನ್ ನಲ್ಲಿ ಬಂದ ಈ ಚಿತ್ರ ಅದ್ಭುತ ಯಶಸ್ಸು ದಾಖಲಿಸಿತ್ತು. ಇದೀಗ ಇದೇ ಜೋಡಿ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಬೆಳ್ಳಿತೆರೆಯ ಈ ಹಿರಿಯ ಜೋಡಿಯನ್ನು ನಿರ್ದೇಶಕ ನಾಗಶೇಖರ್ ಮತ್ತೆ ಒಂದಾಗಿಸುತ್ತಿದ್ದಾರೆ. ಹಾಗಂತ ಇವರೇನು ಪೂರ್ಣ ಪ್ರಮಾಣದಲ್ಲಿ ನಾಯಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪೋಷಕ ಪಾತ್ರದಲ್ಲಿ ಗಂಡ ಹೆಂಡತಿಯಾಗಿ ಕಾಣಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ, ರಮ್ಯಾ ನಟನೆಯ 'ಸಂಜು ವೆಡ್ಸ್ ಗೀತಾ' ಚಿತ್ರದಲ್ಲಿ ಜೈ ಮತ್ತು ಸುಹಾಸಿನಿ ಒಂದಾಗುತ್ತಿದ್ದಾರೆ.

ಕಳೆದ ವರ್ಷ ತೆರೆಕಂಡ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ವಿಷ್ಣುವರ್ಧನ್ ಗೆ ಜತೆಯಾಗಿ ಸುಹಾಸಿನಿ ನಟಿಸಿ ಗಮನ ಸೆಳೆದಿದ್ದರು. ಅದಾದ ಬಳಿಕ 'ಎರಡನೇ ಮದುವೆ' ಚಿತ್ರಕ್ಕಾಗಿ ಅನಂತನಾಗ್ ಗೆ ಜೋಡಿಯಾಗಿ ನಟಿಸಿದ್ದರು. ಇದೀಗ ಜೈಜಗದೀಶ್ ಜತೆ ನಟಿಸುತ್ತಿರುವುದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada