»   » ಚೇತನ್ ಚಿಲಕ ಹಾಕಿಕೊಂಡು ಏನು ಮಾಡ್ತಿದ್ದೀರಾ?

ಚೇತನ್ ಚಿಲಕ ಹಾಕಿಕೊಂಡು ಏನು ಮಾಡ್ತಿದ್ದೀರಾ?

Posted By:
Subscribe to Filmibeat Kannada

'ಸೂರ್ಯಕಾಂತಿ' ಬಳಿಕ ನಾಯಕ ನಟ ಚೇತನ್ ಎಲ್ಲಿ? ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದ 'ಸೂರ್ಯಕಾಂತಿ' ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ವಿಭಿನ್ನ ಕಥಾಹಂದರದ 'ಆ ದಿನಗಳು' ಚಿತ್ರದ ನಿರೀಕ್ಷೆಯಲ್ಲಿ ಹೋದ ಪ್ರೇಕ್ಷಕರಿಗೆ ಕೆ ಎಂ ಚೈತನ್ಯ ನಿರಾಸೆ ಮೂಡಿಸಿದ್ದರು. ಚಿತ್ರಕ್ಕೆ ಸಿಕ್ಕ ನೀರಸ ಪ್ರತಿಕ್ರಿಯೆಯಿಂದ ಚೇತನ್ ಸಹ ಕಂಗಾಲಾಗಿದ್ದರು.

ಸೋಲಿನ ಪರಾಮರ್ಶೆಯಲ್ಲಿರುವ ಚೇತನ್ ಈಗ ಪಕ್ಕಾ ಚಿತ್ರಕತೆಯೊಂದರ ಸಿದ್ಧತೆಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಚಿತ್ರಕತೆಗಾಗಿ ಯಾರ ಮನೆ ಬಾಗಿಲನ್ನೂ ತಟ್ಟಿಲ್ಲ. ಬದಲಾಗಿ ಅವರೇ ಚಿತ್ರಕತೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ.ಸದ್ಯಕ್ಕೆ ಅವರು ಚಿಲಕ ಹಾಕಿಕೊಂಡು ಏಕಾಂತದಲ್ಲಿ ಕತೆ ಹೆಣೆಯುತ್ತಿದ್ದಾರೆ.

ಕಳೆದ ಕೆಲತಿಂಗಳಿಂದ ಚಿತ್ರಕತೆಯಲ್ಲಿ ತಲ್ಲೀನರಾಗಿರುವ ಚೇತನ್ ಮನೆಯಿಂದ ಹೊರಗೆಲ್ಲೂ ಅಡಿಯಿಡುತ್ತಿಲ್ಲ ಎಂಬುದು ಸದ್ಯದ ಸುದ್ದಿ. ಅದು ಏನೇ ಇರಲಿ ಚೇತನ್ ಆದಷ್ಟು ಬೇಗ ಚಿತ್ರಕತೆಯನ್ನು ಮುಗಿಸಿ ವಿಭಿನ್ನ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿ ಎಂದು ಆಶಿಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada