»   » ಕಲಾಸಿ ಪಾಳ್ಯದಲ್ಲಿ ಅರೆಬೆತ್ತಲಾದ ಆದಿತ್ಯ

ಕಲಾಸಿ ಪಾಳ್ಯದಲ್ಲಿ ಅರೆಬೆತ್ತಲಾದ ಆದಿತ್ಯ

Posted By:
Subscribe to Filmibeat Kannada

ಆದಿತ್ಯ ನಾಯಕನಾಗಿರುವ 'ಡೆಡ್ಲಿ 2' ಚಿತ್ರಕ್ಕೆ ರವಿಶ್ರೀವತ್ಸ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಂಡ ಈ ಹಿಂದೆ ನಿರ್ಮಿಸಿದ್ದ 'ಡೆಡ್ಲಿ ಸೋಮ' ಅದ್ಭುತ ಯಶಸ್ಸನ್ನು ಕಂಡಿತ್ತು. ಆದರಿಂದ ಪ್ರೇರಿತರಾಗಿ ಆ ಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಕೆ ಕೆ ಫಿಲಂಸ್ ಲಾಂಛನದಲ್ಲಿ ಎಂ. ಮಂಜುನಾಥ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತು ಹೋಗಿದ್ದ ಸೋಮ ಮತ್ತೆ ಹೇಗೆ ಎದ್ದು ಬರುತ್ತಾನೆ ಎಂಬುದೇ ಈ ಚಿತ್ರದ ಸಸ್ಪೆನ್ಸ್. ಛೇಸಿಂಗ್ ದೃಶ್ಯವೊಂದರಲ್ಲಿ ಅಭಿನಯಿಸುವಾಗ ಪೆಟ್ಟುತಿಂದು 2 ತಿಂಗಳ ವಿಶ್ರಾಂತಿಯ ನಂತರ ಮತ್ತೆ ಅಭಿನಯಿಸಿದ ನಾಯಕ ಆದಿತ್ಯ ಈ ಚಿತ್ರಕ್ಕಾಗಿ ನಿಜಕ್ಕೂ ತುಂಬಾ ಪರಿಶ್ರಮ ಪಡುತ್ತಿದ್ದಾರೆ. ಚಿತ್ರ ನೈಜವಾಗಿ ಮೂಡಿಬರಲೆಂದು ಕಲಾಸಿಪಾಳ್ಯದಂಥ ಜನನಿಬಿಡ ಪ್ರದೇಶದಲ್ಲಿ ಅರೆಬೆತ್ತಲೆಯಾಗಿ ಓಡಿದ್ದಾರೆ.

ಕಳೆದ 18 ರಿಂದ 24 ರವರೆಗೆ ಚಿತ್ರೀಕರಿಸಿ ಮಾತಿನ ಭಾಗ ಮುಕ್ತಾಯಗೊಳಿಸಿದ್ದು, ಇನ್ನು 2 ಹಾಡುಗಳ ಚಿತ್ರಣ ಮಾತ್ರ ಉಳಿದಿದೆ. ಎಡಿಟಿಂಗ್ ಮುಗಿದಿದ್ದು ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. ನಟಿ ಸುಹಾಸಿನಿ ಪ್ರಮುಖ ಪಾತ್ರ ನಿರ್ವಹಿಸಿದ್ದು ನಾಯಕಿ ಪಾತ್ರದಲ್ಲಿ ಮೇಘನಾ ಹಾಗೂ ದೇವರಾಜ್, ಅವಿನಾಶ್ ಉಳಿದ ತಾರಾಗಣದಲ್ಲಿದ್ದಾರೆ. ಮ್ಯಾಥ್ಯೂರಾಜನ್ ಛಾಯಾಗ್ರಹಣ, ಸುಷ್ಮಾವೀರ್ ಸಹ ನಿರ್ದೇಶನ, ಜೋನಿ ಹರ್ಷ ಸಂಕಲನ ಈ ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada