For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಗಳ ಜೋಡಿಯಾದ ಮಲೆನಾಡ ಮಲ್ಲಿಗೆ ದೀಪಾ

  By Mahesh
  |

  ಕನ್ನಡ ಚಿತ್ರರಂಗದಲ್ಲಿ ಎಂಥಾ ಪ್ರತಿಭೆಯಿದ್ದರೂ ಕೆಲವೊಮ್ಮೆ ಸ್ಟಾರ್ ನಟರ ಜೊತೆ ಅಭಿನಯಿಸಲು ಅದೃಷ್ಟ ಬೇಕು. ಸಾಮಾನ್ಯವಾಗಿ ಪರಭಾಷೆ ಸುಂದರಿಯರನ್ನೇ ಮೆಚ್ಚುವ ನಮ್ಮ ಸ್ಯಾಂಡಲ್ ವುಡ್ ಮಂದಿ, ಅಪರೂಪಕ್ಕೆ ಮಲೆನಾಡ ಹುಡುಗಿಯೊಬ್ಬಳಿಗೆ ಅವಕಾಶ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ಜೋಡಿಯಾಗಿ ನಟಿಸುವ ಅವಕಾಶ ಅದು ಮೊದಲ ಎರಡು ಚಿತ್ರಗಳಲ್ಲೇ ಸಿಕ್ಕಿದ್ದು, ಚಿಕ್ಕಮಗಳೂರು ಹುಡುಗಿ ದೀಪಾ ಸನ್ನಿಧಿಗೆ ಭರ್ಜರಿ ಛಾನ್ಸ್ ಎನ್ನಬಹುದು. ದೀಪಾ ಅಂತೂ ಸಂತೋಷದಿಂದ ಕುಣಿದಾಡುತ್ತಿದ್ದಾಳೆ.

  ಸಾಮಾನ್ಯವಾಗಿ ಎಷ್ಟೇ ಸುರಸುಂದರಿಯರಾಗಿದ್ದರೂ ದೊಡ್ಡ ಸ್ಟಾರ‍್ಗೆ ಮೊದಲ ಬಾರಿಯೇ ನಾಯಕಿಯೋಗೋದು ತೀರಾ ಕಡಿಮೆ ಅಂತಹದ್ದರಲ್ಲಿ ದರ್ಶನ್ ಅಭಿನಯದ ಸಾರಥಿ ಚಿತ್ರದ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ಮಲೆನಾಡ ಮಲ್ಲಿಗೆಯಂತಹ ಮಲೆನಾಡಿನ ಹುಡುಗಿ ದೀಪಾ ಸನ್ನಿಧಿ ಈಗ ಮತ್ತೊಂದು ಬಂಪರ್ ಲಾಟರಿ ಹೊಡೆದಂತಾಗಿದೆ ಯಾಕಂದ್ರೆ ಸ್ಯಾಂಡಲ್‍ವುಡ್‍ನಲ್ಲಿ ಉತ್ತಮ ನಟನಾಗಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

  ದರ್ಶನ್ ಜೋಡಿಯಾಗಿ ನಟಿಸಿರುವ ಸಾರಥಿ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರದಿಂದ ಮುಂದೂಡಲ್ಪಟ್ಟಿದೆ. ಈಗ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಚಿತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ.

  ಸಾರಥಿ ಚಿತ್ರದ ಟೈಟಲ್ ಸಾಂಗ್ ಇಷ್ಟ ಪಡುವ ದೀಪಾ, ದರ್ಶನ್ ಅವರಿಂದ ಸಾಕಷ್ಟು ಅಭಿನಯದ ಪಾಠವನ್ನು ಕಲಿತೆ ಎನ್ನುತ್ತಾರೆ. ಹುಡುಗ್ರು ಚಿತ್ರ ಆದಮೇಲೆ ಪುನೀತ್ ರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಕಾಂಬಿಯೇಷನ್ ನಲ್ಲಿ ಬರುತ್ತಿರುವ ಪರಮಾತ್ಮ ಚಿತ್ರದಲ್ಲೂ ದೀಪಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಕ್ಷಿತಾ ಹಾಗೂ ರಮ್ಯ ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಈ ರೀತಿ ಡಬಲ್ ಆಫರ್ ಕನ್ನಡದ ನಾಯಕಿಗೆ ಸಿಕ್ಕಿದ್ದು ಕಮ್ಮಿ ಎನ್ನಬಹುದು.

  ಸುದೀಪ್ ಜೊತೆ ನಟಿಸುವ ಅವಕಾಶವೂ ಸಿಕ್ಕಿತ್ತು ಅಲ್ಲದೆ, ಸಾರಥಿ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ಚಾನ್ಸ್ ಮಿಸ್ ಆಯ್ತು. ಸುದೀಪ್ ಜೊತೆ ನಟಿಸುವ ಆಸೆಯಿದೆ. ಪರಮಾತ್ಮದಲ್ಲಿ ಐಂದ್ರಿತಾ ರೇ ಹಾಗೂ ರಮ್ಯಾ ಬಾರ್ನೆ ಜೊತೆ ನಟಿಸುವ ಸಾಧ್ಯತೆಯಿದ್ದರೂ ನನ್ನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಯೋಗರಾಜ ಭಟ್ ಸರ್ ಹೇಳಿದ್ದಾರೆ. ನಾನು ಇನ್ನೂ ಕಲಿಕೆ ದಿನಗಳನ್ನು ಎದುರಿಸುತ್ತಿದ್ದೇನೆ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎನ್ನುತ್ತಾರೆ ದೀಪಾ.

  English summary
  Kannada Actress Deepa Sannidhi a native of Chikmagalur is new to Sandalwood but already bagged two good projects.One with Challenging Star Darshan in Sarathi and another with Puneet Rajkumar in Paramathma Movie directed by Yogaraj Bhat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X