For Quick Alerts
  ALLOW NOTIFICATIONS  
  For Daily Alerts

  ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನಕ್ಕೆ ವೇದಿಕೆ ಸಜ್ಜು

  By Rajendra
  |

  2008-09ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದು ವಾರ್ತಾ ಇಲಾಖೆಯ ನಿರ್ದೇಶಕ ಡಾ.ಮುದ್ದುಮೋಹನ್ ತಿಳಿಸಿದ್ದಾರೆ.

  ಸಚಿವರಾದ ಆರ್ ಅಶೋಕ್, ಸಂಸದ ಅನಂತಕುಮಾರ್, ನಟರಾದ ಅಂಬರೀಷ್, ವಿ ರವಿಚಂದ್ರನ್, ಜಗ್ಗೇಶ್, ಶ್ರೀನಾಥ್, ದೊಡ್ಡರಂಗೇಗೌಡ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

  ಡಾ.ರಾಜ್ ಕುಮಾರ್ ಪ್ರಶಸ್ತಿಯು ಹಿರಿಯ ಅಭಿನೇತ್ರಿ ಬಿ ಸರೋಜಾ ದೇವಿ ಅವರಿಗೆ ವರಿಸಿದ್ದು, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಕೆ ಎಸ್ ಆರ್ ದಾಸ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಡಾ.ವಿಷ್ಣುವರ್ಧನ್ ಪ್ರಶಸ್ತಿಯು ವಿ ಆರ್ ರಾಜು ಮತ್ತು ಪಿ ಎನ್ ಕೆ ಪ್ರಸಾದ್ ಅವರಿಗೆ ನೀಡಲಾಗುತ್ತದೆ. ಯೋಗೇಶ್ ಮತ್ತು ರಾಧಿಕಾ ಪಂಡಿತ್ ಅವರು ಕ್ರಮವಾಗಿ ಅತ್ಯುತ್ತಮನಟ, ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಅವರು ಅತ್ಯುತ್ತಮ ಪೋಷಕ ನಟಿ ಗೌರವಕ್ಕೆ ಪಾತ್ರರಾಗಿದ್ದಾರೆ.

  ಎರಡುವರೆ ಗಂಟೆಗಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಿ .ಸರೋಜಾದೇವಿ ಅಭಿನಯದ ಅಮರಶಿಲ್ಪಿ ಜಕಣಾಚಾರಿ ಚಿತ್ರದ "ಚೆಲುವಾಂಥ ಚೆನ್ನಿಗನೆ..." ಹಾಡಿಗೆ ತಾರಾ ಹೆಜ್ಜೆ ಹಾಕಲಿದ್ದಾರೆ. ಆಪ್ತರಕ್ಷಕ ಚಿತ್ರದ ಹಾಡೊಂದಕ್ಕೆ ಶ್ರೀನಗರ ಕಿಟ್ಟಿ ಮತ್ತು ರೂಪಿಕಾ ನೃತ್ಯ ಮಾಡಲಿದ್ದಾರೆ. ಗುರುರಾಜ್ ಮತ್ತವರ ತಂಡದಿಂದ ಮನರಂಜನೆ ಕಾರ್ಯಕ್ರಮ, ಪಂಡಿತ್ ಶೈಲೇಶ್ ಭಗವಾನ್ ಅವರಿಂದ ಶಹನಾಯಿ ವಾದನ ಪ್ರೇಕ್ಷಕರನ್ನು ರಂಜಿಸಲಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  The much-awaited State Film Awards for 2008-09 will be presented at a function organised at Koramangala Indoor Stadium on Saturday evening. The Dr. Rajkumar award would be conferred on B. Saroja Devi, and Puttanna Kanagal award on K.S. R. Das, besides Dr. Vishnuvardhan Award will be presented to V.R. Raju, while R.N.K. Prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X