»   »  ಪಡ್ಡೆಗಳ ನಿದ್ದೆ ಕೆಡಿಸಲು ಮತ್ತೆ ಬರುತ್ತಿದ್ದಾರೆ ಯಾನ!

ಪಡ್ಡೆಗಳ ನಿದ್ದೆ ಕೆಡಿಸಲು ಮತ್ತೆ ಬರುತ್ತಿದ್ದಾರೆ ಯಾನ!

Posted By:
Subscribe to Filmibeat Kannada
Yana Gupta
ಕ್ಯಾಲೆಂಡರ್ ಹುಡುಗಿ ಯಾನಾ ಗುಪ್ತ ಪಡ್ಡೆಗಳ ನಿದ್ದೆ ಕೆಡಿಸಲು ಮತ್ತೆ ಕನ್ನಡ ಚಿತ್ರರಂಗದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. 'ಜೋಗಿ' ಚಿತ್ರದ 'ಬಿನ್ ಲಾಡೆನ್ನು ನನ್ ಮಾವ, ಬಿಲ್ ಕ್ಲಿಂಟನ್ನು ನನ್ನ ಭಾವ...' ಎಂದು ಐಟಂ ಹಾಡಿಗೆ ಹೆಜ್ಜ್ಜೆಹಾಕಿದ್ದನ್ನು ಬಹುಶಃ ಪಡ್ಡೆಗಳು ಇನ್ನೂ ಮರೆತಿರಲ್ಲ. ಇಷ್ಟಕ್ಕ್ಕೂ ಯಾನ ಗುಪ್ತ ಪ್ರಯಾಣ ಬೆಳೆಸಿರುವುದು ಪ್ರೇಮ್ ಮತ್ತು ರಮ್ಯಾ ನಟಿಸುತ್ತಿರುವ 'ಜೊತೆಗಾರ' ಚಿತ್ರಕ್ಕಾಗಿ.

'ಜೋಗಿ' ಚಿತ್ರಕ್ಕೆ ಆನಾ ಎಂದು ಯಾನಾ ಗುಪ್ತರನ್ನು ಕರೆತಂದದ್ದು ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್. 'ಜೊತೆಗಾರ'ಚಿತ್ರಕ್ಕೂ ಮತ್ತೆ ಆಕೆಯನ್ನು ಕರೆತರುತ್ತಿದ್ದಾರೆ. 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರಕ್ಕೆ ಮಲ್ಲಿಕಾ ಶೆರಾವತ್ ರನ್ನು ಕರೆದುತಂದು ಹಾಡಿ,ಕುಣಿಸಿ ನಲಿಸಿದ್ದರು ನಿರ್ದೇಶಕ ಪ್ರೇಮ್. ಈಗ ಯಾನಾ ಪ್ರಯಾಣ ಮುಂದುರ್ವರಿದಿದೆ ಅಷ್ಟೆ!

ಜೊತೆಗಾರನಿಗೆ ತಮಿಳಿನ ಸಿಂಗಮಣಿ ಅವರ ಚಿತ್ರಕಥೆ, ನಿರ್ದೇಶನವಿದೆ. ಪ್ರಸ್ತುತ ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಸಾಗುತ್ತಿರುವ ಜೊತೆಗಾರಿಗೆ ಒಂದೇ ಒಂದು ಹಾಡು ಮಾತ್ರ ಬಾಕಿ ಇದೆ. ಆ ಬಾಕಿ ಇರುವ ಐಟಂ ಸಾಂಗ್ ನಲ್ಲೇ ಯಾನ ಕುಣಿಯಲಿರುವುದು. ಇದಕ್ಕಾಗಿ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ಟನ್ನ್ನೂ ಹಾಕಲಾಗಿದೆ.

ಚಿತ್ರದ ತಾರಾಗಣದಲ್ಲಿ ಪ್ರೇಮ್, ರಮ್ಯಾ ಜೊತೆಗೆ ಪಂಚಭಾಷಾ ತಾರೆ ಲಕ್ಷ್ಮಿ, ಆಶಿಷ್ ವಿದ್ಯಾರ್ಥಿ, ದೊಡ್ಡಣ್ಣ, ಸಾಧು ಕೋಕಿಲ ಮೊದಲಾದವರ ಅಭಿನಯ ಇದೆ. ಪ್ರೇಮ್ ಅವರದು ಗಾಯನ ಪಾತ್ರವಂತೆ.ಎಸಿಪಿ ಆಶಿಷ್ ವಿದ್ಯಾರ್ಥಿ ಮಗಳಾಗಿ ರಮ್ಯಾ ಕಾಣಿಸುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ರಮ್ಯಾ ಜೊತೆಗಾರನಿಗೆ ಹಾಡೊಂದು ಬಾಕಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada