»   » 2009-10ನೇ ಸಾಲಿನ ಚಲನಚಿತ್ರ ಪ್ರಶಸ್ತಿ ವಾಪಸ್

2009-10ನೇ ಸಾಲಿನ ಚಲನಚಿತ್ರ ಪ್ರಶಸ್ತಿ ವಾಪಸ್

Posted By:
Subscribe to Filmibeat Kannada

2009-10 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಪೈಕಿ ಪುನೀತ್ ರಾಜ್ ಕುಮಾರ್ ಅಭಿನಯದ "ರಾಜ್" ಚಲನಚಿತ್ರಕ್ಕೆ ಲಭಿಸಿದ್ದ 4 ಪ್ರಶಸ್ತಿಗಳನ್ನು ಹೈಕೋರ್ಟಿನ ಸೂಚನೆ ಮೇರೆಗೆ ಹಿಂಪಡೆಯಲಾಗಿದೆ.

2009-10 ನೇ ಸಾಲಿನಲ್ಲಿ ರಾಜ್ಯ ಸರ್ಕಾರ 'ರಾಜ್' ಚಿತ್ರಕ್ಕೆ ವಿ.ಹರಿಕೃಷ್ಣ ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ", ಶ್ರೀ ಶ್ರೀನಿವಾಸ್ ಬಾಬು ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ", ಶ್ರೀ ಟಿಪ್ಪು ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ" ಹಿಂಪಡೆಯಲಾಗಿದೆ. ಅಲ್ಲದೇ ಶ್ರೀನಗರ ಕಿಟ್ಟಿ ಅಭಿನಯದ "ಒಲವೇ ಜೀವನ ಲೆಕ್ಕಚಾರ" ಕನ್ನಡ ಚಲನಚಿತ್ರಕ್ಕೆ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಕಥೆ ಬರಹಗಾರ" ಪ್ರಶಸ್ತಿಯನ್ನು ಹಿಂದಿರಿಗಿ ಸ್ವೀಕರಿಸಲಾಗಿದೆ.

2009-10 film awards were revoked

ಶ್ರೀ ಹರಿಕೃಷ್ಣ, ಶ್ರೀ ಶ್ರೀನಿವಾಸ್ ಬಾಬು ಮತ್ತು ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಇವರುಗಳಿಗೆ ಪ್ರಶಸ್ತಿ ಜೊತೆಗೆ ನೀಡಲಾಗಿದ್ದ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನಗಳನ್ನು ಹಿಂಪಡೆಯಲಾಗಿದೆ. ಗಾಯಕ ಶ್ರೀ ಟಿಪ್ಪು ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ'ಗೆ ಸಂಬಂಧಿಸಿದ ಫಲಕ ಮತ್ತು ನಗದು ಬಹುಮಾನಗಳನ್ನು ಹಿಂಪಡೆಯಲಾಗಿದ್ದು, ಪ್ರಶಸ್ತಿ ಪತ್ರ ಕಳೆದು ಹೋಗಿರುವ ಕಾರಣ ಅದನ್ನು ಹಿಂಪಡೆಯಲಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಂದಹಾಗೆ ಅವಧಿ ಮೀರಿ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹೈಕೋರ್ಟ್ ಗೆ ಎಸ್.ರಾಧ ಎಂಬುವವರು ಈ ಹಿಂದೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಶಸ್ತಿಗಳನ್ನು ಹಿಂಪಡೆಯಲು ಹೈಕೋರ್ಟ್ ಸೂಚಿಸಿತ್ತು.

English summary
The 2009-10 Karnataka State Film Awards were revoked

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada