»   » ಬಿಟೆಕ್ ಬಾಬು ಬುಟ್ಟಿಗೆ ಬಿದ್ದ ನಟಿ ನಯನತಾರಾ

ಬಿಟೆಕ್ ಬಾಬು ಬುಟ್ಟಿಗೆ ಬಿದ್ದ ನಟಿ ನಯನತಾರಾ

Posted By:
Subscribe to Filmibeat Kannada

ಪ್ರಭುದೇವ ಜೊತೆ ಟೂ ಬಿಟ್ಟ ಮೇಲೆ ನಟಿ ನಯನತಾರಾ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಾರಿ ಅವರು ಒಪ್ಪಿಕೊಂಡಿರುವುದು ಟಾಲಿವುಡ್ ಚಿತ್ರ. ತೆಲುಗಿನಲ್ಲಿ ಹೊಸ ಭರವಸೆ ಹುಟ್ಟಿಸಿರುವ ರಾಣಾ ದಗ್ಗುಬಾಟಿ ಜೊತೆ ನಯನತಾರಾ ಅಭಿನಯಿಸಲಿದ್ದಾರೆ.

ಇಲ್ಲ ಇಲ್ಲ ಇನ್ನು ಸಾಕು ಚಿತ್ರರಂಗ. ಶೀಘ್ರದಲ್ಲೇ ಗುಡ್ ಬೈ ಹೇಳುತ್ತೇನೆ ಎನ್ನುತ್ತಿದ್ದ ನಯನತಾರಾ ಬಳಿಕ ಒಂದೊಂದೇ ಚಿತ್ರಗಳಿಗೆ ಸಹಿ ಹಾಕುತ್ತಿರುವುದು ವಿಶೇಷ. ಅದೂ ಹೆಚ್ಚಾಗಿ ದಕ್ಷಿಣದ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಕಿಚ್ಚ ಸುದೀಪ್ ಜೊತೆಗೆ ಬಚ್ಚನ್ ಚಿತ್ರದಲ್ಲೂ ಅಭಿನಯಿಸಲು ಒಪ್ಪಿದ್ದಾರೆ ಎನ್ನುತ್ತವೆ ಮೂಲಗಳು.

ಚಿತ್ರದ ಹೆಸರು 'ಬಿಟೆಕ್ ಬಾಬು'. ಇದೊಂದು ಆಕ್ಷನ್ ಪ್ರಧಾನ ಚಿತ್ರವಂತೆ. ಚಿತ್ರದಲ್ಲಿ ಪ್ರೀತಿ ಪ್ರೇಮ ಪ್ರಣಯ ಸನ್ನಿವೇಶಗಳಿಗೂ ಜಾಗ ನೀಡಲಾಗಿದೆ ಎನ್ನುತ್ತವೆ ಮೂಲಗಳು. ಬಾಲಿವುಡ್ ಚಿತ್ರಗಳ ಕಡೆಗೂ ನಯನತಾರಾ ಒಲವು ತೋರಿದ್ದರು. (ಏಜೆನ್ಸೀಸ್)

English summary
The south siren has signed up one more film after her breakup with Prabhu Deva. This time she is acting with Rana Daggubati in Btech Babu.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X