»   » ಹಾಸ್ಯನಟ ಕೆ ಎಂ ರತ್ನಾಕರ್ ಪಾರ್ಶ್ವನೋಟ

ಹಾಸ್ಯನಟ ಕೆ ಎಂ ರತ್ನಾಕರ್ ಪಾರ್ಶ್ವನೋಟ

Posted By:
Subscribe to Filmibeat Kannada
K M Rathnakar
ಹಾಸ್ಯ ನಟ ರತ್ನಾಕರ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಹಾಸ್ಯನಟನೊಬ್ಬನನ್ನು ಕಳೆದುಕೊಂಡಿದೆ. ತಮ್ಮದೇ ಆದಂತಹ ವಿಭಿನ್ನ ಮ್ಯಾನರಿಜಂನಿಂದ ರತ್ನಾಕರ್ ಗಮನಸೆಳೆದಿದ್ದರು. 300ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅವರ ಬಗ್ಗೆ ಕಿರುಪರಿಚಯ ಇಲ್ಲಿದೆ.

300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೂ ಅವರು ತೀವ್ರಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದದ್ದು ವಿಪರ್ಯಾಸ. ಕೊನೆಗಾಲದಲ್ಲಿ ಚಿತ್ರಗಳಲ್ಲಿ ಅವಕಾಶ ನೀಡುವಂತೆ ದುಂಬಾಲು ಬಿದ್ದರು ಅವರಿಗೆ ಯಾರು ಅವಕಾಶ ನೀಡಲು ಮುಂದೆ ಬರಲಿಲ್ಲ. ಈ ಕೊರಗು ಎಂಬತ್ತರ ಇಳಿಪ್ರಾಯದಲ್ಲಿದ್ದ ರತ್ನಾಕರ್ ಅವರನ್ನು ಕಾಡುತ್ತಿತ್ತು.

ಅನಾರೋಗ್ಯ ಸಮಸ್ಯೆ ಮತ್ತು ಚಿತ್ರಗಳಲ್ಲಿ ಅವಕಾಶ ಇಲ್ಲದ್ದು ಅವರನ್ನು ಮತ್ತ್ತಷ್ಟು ಕಂಗಾಲಾಗಿಸಿತ್ತು. ರತ್ನಾಕರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ. ರತ್ನಾಕರ್ ಅವರದು ಮೂಲತಃ ಕೊಲ್ಲೂರು ಮೂಕಾಂಬಿಕೆಯ ಅರ್ಚಕರ ವಂಶ.

ರಂಗಭೂಮಿ ಹಿನ್ನೆಲೆಯಿಂದ ಬಂದ ರತ್ನಾಕರ್ ಆರಂಭದಲ್ಲಿ ಸೋರಟ್ ಅಶ್ವತ್ಥ್ ಅವರ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿಂದ ಅವರು ಸಿನಿಮಾರಂಗಕ್ಕೆ ಅಡಿಯಿಟ್ಟರು. ಕು ರಾ ಸೀತಾರಾಮಶಾಸ್ತ್ರಿ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಸ್ಯ ನಟನಾಗಿ ಹೆಸರಾಗಿದ್ದರೂ ಕನ್ಯಾದಾನ, ಸತ್ಯಹರಿಶ್ಚಂದ್ರ ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.

ಅವರ ವಿಚಿತ್ರ ಧ್ವನಿಯೇ ಅವರ ಪಾತ್ರಕ್ಕೆ ಮೆರುಗು ನೀಡುತ್ತಿತ್ತು. ರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್ ಅವರು ಚಲನಚಿತ್ರ ಕಾರ್ಮಿಕರ, ಕಲಾವಿದರ ಒಕ್ಕೂಟದಿಂದ ಒಂದಿಷ್ಟು ಆರ್ಥಿಕ ಸಹಾಯ ಮಾಡಿದ್ದ್ದರು. ನಟ ದರ್ಶನ್ ಸಹ ರು.25,000 ಧನ ಸಹಾಯ ಮಾಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada