»   » ಪರೀಕ್ಷೆಯಲ್ಲಿ ತೊಂಬತ್ತೇಳರ ಹರೆಯದ ಏಣಗಿ ಬಾಳಪ್ಪ

ಪರೀಕ್ಷೆಯಲ್ಲಿ ತೊಂಬತ್ತೇಳರ ಹರೆಯದ ಏಣಗಿ ಬಾಳಪ್ಪ

Posted By:
Subscribe to Filmibeat Kannada

ಖ್ಯಾತ ರಂಗಭೂಮಿ ಕಲಾವಿದ ಹಾಗೂ ಗಾಯಕ ಏಣಗಿ ಬಾಳಪ್ಪ ಸುದೀರ್ಘ ಸಮಯದ ಬಳಿಕ ನಟಿಸಿದ ಚಿತ್ರ 'ಪರೀಕ್ಷೆ'. ಚಿತ್ರದಲ್ಲಿ ಅಭಿನಯಿಸಿರುವ ಅವರು ಇತ್ತೀಚೆಗೆ ಬೆಳಗಾವಿಯಿಂದ ಬೆಂಗಳೂರಿಗೆ ಬಂದು ಡಬ್ಬಿಂಗ್ ಹೇಳಿದ್ದಾರೆ. ತಮ್ಮ 97ರ ಇಳಿವಯಸ್ಸಿನಲ್ಲೂ ಏಣಗಿ ಬಾಳಪ್ಪ ಅವರ ಕ್ರಿಯಾಶೀಲತೆ ಎಂಥಹವರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

'ಪರೀಕ್ಷೆ' ಚಿತ್ರವನ್ನು ರವಿ ಕುಮಾರ್ ಎಂಬುವವರು ನಿರ್ದೇಶಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ್ ಪಾಟೀಲ್ ಚಿತ್ರದ ನಿರ್ಮಾಪಕರು. ಕಥಾ ಪ್ರಧಾನವಾದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅನು ಪ್ರಭಾಕರ್ ಮತ್ತು ಮುನಿ ಅಭಿನಯಿಸಿದ್ದಾರೆ.

ಪ್ರಾಥಮಿಕ ಶಿಕ್ಷಣ, ಭಯಾನಕ ಏಡ್ಸ್ ಕುರಿತು ಶಿಕ್ಷಣ ಮತ್ತು ರೋಗ ನಿರ್ಮೂಲನೆ ಹಾಗೂ ಮಹಿಳಾ ಸ್ವಾವಲಂಭನೆಯಂತಹ ಪ್ರಗತಿಶೀಲ ಘಟನೆಗಳ ಆಧಾರವಾಗಿ ಚಿತ್ರವನ್ನು ತೆರೆಗೆ ತರಲಾಗಿದೆ. ಚಿತ್ರದಲ್ಲಿ ಬಾಳಪ್ಪ ಅವರ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರಕತೆಯನ್ನು ರವಿಕುಮಾರ್ ಅವರು ಹೇಳಿದಾಗ 'ಜಗಜ್ಯೋತಿ ಬಸವೇಶ್ವರ' ನಾಟಕದ ಕೆಲವು ದೃಶ್ಯಗಳ ರೀತಿಯಲ್ಲೇ ಇದೆ ಎನ್ನಿಸಿತು ಎಂದು ಏಣಗಿ ಬಾಳಪ್ಪ ಅಭಿಪ್ರಾಯಪಟ್ಟಿದ್ದಾರೆ. 'ಮಾಡಿ ಮಡಿದವರು' ಹಾಗೂ ವರನಟ ಡಾ.ರಾಜ್ ಕುಮಾರ್ ಅವರ ಕೋರಿಕೆಯ ಮೇರೆಗೆ 'ಜನುಮದ ಜೋಡಿ' ಚಿತ್ರಗಳಲ್ಲಿ ಏಣಗಿ ಬಾಳಪ್ಪ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada