»   »  ಗಿಲ್ಲಿ ಚಿತ್ರದ ದುರಂತ ಪ್ರೇಮಿಯಾಗಿ ಗುರುರಾಜ್

ಗಿಲ್ಲಿ ಚಿತ್ರದ ದುರಂತ ಪ್ರೇಮಿಯಾಗಿ ಗುರುರಾಜ್

Subscribe to Filmibeat Kannada
Rakul Preeth Singh
ಸತ್ಯ ಇನ್ ಲವ್ ನಂತ ಆಕ್ಷನ್ ಸಿನಿಮಾ ಮಾಡಿದ ರಾಘವ ಲೋಕಿ ಈಗ ರೀಮೇಕ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ತಮಿಳು, ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ ಕಂಡ 7ಜಿ ರೈನ್‌ಬೋ ಕಾಲೋನಿ ಕನ್ನಡದಲ್ಲಿ ಗಿಲ್ಲಿಯಾಗಿ ನಿರ್ಮಾಣವಾಗುತ್ತಿದೆ. ವಿತರಕ ಜಯಣ್ಣ ಹಾಗೂ ಅಣಜಿ ನಾಗರಾಜ್ ಹಾಗೂ ಪ್ರತಾಪ್ ಸೇರಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಪೊರ್ಕಿಯಾದ ಹುಡುಗನೊಬ್ಬ ಹುಡುಗಿಯೊಬ್ಬಳ ಸಹವಾಸದಿಂದ ಬದಲಾದರೂ ಆಕೆ ಆತನಿಗೆ ಸಿಗುವುದಿಲ್ಲ. ಈ ದುರಂತ ಪ್ರೇಮಿಯ ಪಾತ್ರವನ್ನು ಜಗ್ಗೇಶ್ ರವರ ಪುತ್ರ ಗುರುರಾಜ್ ಅಭಿನಯಿಸಿದ್ದಾರೆ. ಮೂಲತಃ ಮಾಡೆಲ್ ಆಗಿರುವ ರಾಕುಲ್ ಪ್ರೀತ್‌ಸಿಂಗ್ ಈ ಚಿತ್ರದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ.

ಕಳೆದ ವಾರದಿಂದ ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಪ್ರಾರಂಭವಾಗಿದೆ. ಸುಧಾ ಬೆಳವಾಡಿ, ಶ್ರೀನಿವಾಸ್, ವೀಣಾ ವೆಂಕಟೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಮುಂಗಾರು ಮಳೆಯ ಕೃಷ್ಣರ ಛಾಯಾಗ್ರಹಣ ಯುವನ್ ಶಂಕರ್ ರಾಜಾ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗಿಲ್ಲಿ ಚಿತ್ರದ ನಾಯಕಿ ರಾಕುಲ್ ರ ಕನ್ನಡ ಪ್ರೇಮ
ಗಿಲ್ಲಿ ಚಿತ್ರಕ್ಕೆ ದಿಲ್ಲಿ ಮಾಡೆಲ್ ರಾಕುಲ್ ಸಿಂಗ್
ಗಿಲ್ಲಿ ಚಿತ್ರಕ್ಕೆ ನಾಯಕನಾಗಿ ಜಗ್ಗೇಶ್ ಪುತ್ರರತ್ನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada