»   » ಪ್ರಜ್ವಲ್ ದೇವರಾಜ್ ತೆಕ್ಕೆಗೆ ಮತ್ತೊಂದು ಚಿತ್ರ

ಪ್ರಜ್ವಲ್ ದೇವರಾಜ್ ತೆಕ್ಕೆಗೆ ಮತ್ತೊಂದು ಚಿತ್ರ

Posted By:
Subscribe to Filmibeat Kannada

ಪ್ರಜ್ವಲ್ ದೇವರಾಜ್ ಮಡಿಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಪ್ರಜ್ವಲ್ ಅಭಿನಯದ ಇತ್ತೀಚಿನ ಚಿತ್ರಗಳು ಅಷ್ಟಾಗಿ ಯಶಸ್ಸು ಕಾಣದಿದ್ದರೂ ಅವಕಾಶಗಳು ಮಾತ್ರ ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗಷ್ಟೆ ಅವರು '3ಡಿ' ಎಂಬ ಚಿತ್ರ ಒಪ್ಪಿಕೊಂಡಿದ್ದರು. ಇದೀಗ 'ವಿಘ್ನೇಶ್' ಎಂಬ ಚಿತ್ರಕ್ಕೆ ಸಹಿಹಾಕಿದ್ದಾರೆ.

ಶ್ರೀನಿವಾಸರಾಜು ಎಂಬುವವರು 'ವಿಘ್ನೇಶ್'ಗೆ ಆಕ್ಷನ್, ಕಟ್ ಹೇಳಲಿದ್ದಾರೆ. ಈ ಹಿಂದೆ ಇವರು ಪ್ರಜ್ವಲ್ ದೇವರಾಜ್ ಅಭಿನಯದ 'ನನ್ನವನು' ಚಿತ್ರವನ್ನು ನಿರ್ದೇಶಿಸಿದ್ದರು. ಇದೀಗ ಮತ್ತೊಮ್ಮೆ ಪ್ರಜ್ವಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಎಂ ಎನ್ ಕುಮಾರ್.

ಚಿತ್ರದಲ್ಲಿ ಇಬ್ಬರು ನಾಯಕಿಯರು. ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಹುಡುಕಾಟ ನಡೆದಿದೆ. ಕನ್ನಡದ ಹುಡುಗಿಯರಿಗೆ ಅವಕಾಶ ನೀಡುವ ಮನಸ್ಸು ಚಿತ್ರತಂಡಕ್ಕಿದೆ. ಇದೊಂದು ತ್ರಿಕೋನ ಪ್ರೇಮಕತೆ ಎಂಬುದು ಮೇಲ್ಮೋಟಕ್ಕೆ ಗೊತ್ತಾಗುತ್ತದೆ. ಕೆ ದತ್ತು ಅವರ ಛಾಯಾಗ್ರಹಣ, ಗುರುಕಿರಣ್ ಸಂಗೀತ ಹಾಗೂ ರವಿವರ್ಮ ಸಾಹಸ ಚಿತ್ರಕ್ಕಿರುತ್ತದೆ. ಚಿತ್ರ ಆಗಸ್ಟ್ ನಲ್ಲಿ ಸೆಟ್ಟೇರಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada