»   »  ರಾವಣನಿಗೆ ಧೈರ್ಯ ತುಂಬಿದ ನಾಯಕಿ

ರಾವಣನಿಗೆ ಧೈರ್ಯ ತುಂಬಿದ ನಾಯಕಿ

Posted By:
Subscribe to Filmibeat Kannada
ಕೆಲವರಿಗೆ ವಿದ್ಯೆ ವರವಾಗಿ ಬಂದರೂ ಅದನ್ನು ಪ್ರದರ್ಶಿಸಲು ಅಂಜಿಕೆ ಅಡ್ದಿಯಾಗುತ್ತದೆ. ಆ ಸಮಯದಲ್ಲಿ ಧೈರ್ಯ ತುಂಬಿ ಹುರಿದುಂಬಿಸುವವರ ಅಗತ್ಯವಿರುತ್ತದೆ. ರಾವಣನಾಗಿ ಅಭಿನಯಿಸುತ್ತಿರುವ ನಾಯಕ ಯೋಗೀಶ್ ಚಿತ್ರದಲ್ಲಿ ವಿದ್ಯಾವಂತನಾದರೂ ನಾಚಿಕೆ ಸ್ವಭಾವದ ಹುಡುಗ.

ಕಾಲೇಜಿನಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿರುತ್ತದೆ. ಗೆದ್ದ ವಿದ್ಯಾರ್ಥಿಗೆ ಐವತ್ತು ಸಾವಿರ ನಗದು ಬಹುಮಾನದೊಂದಿಗೆ ವಿದೇಶ ಪ್ರಯಾಣ ಹಾಗೂ ಅಲ್ಲೇ ಉದ್ಯೋಗ ಕೊಡಿಸುವುದಾಗಿ ತಿಳಿಸಿದ ಪ್ರಾಂಶುಪಾಲರು ಯೋಗೀಶ್‌ಗೆ ಸಂಕಿರಣದಲ್ಲಿ ಭಾಗವಹಿಸಲು ಆಹ್ವಾನಿಸುತ್ತಾರೆ. ಆದರೆ ಸಂಕೋಚದ ಹುಡುಗ ಯೋಗೀಶ್ ನನ್ನಿಂದಾಗಲ್ಲ ಎನ್ನುತ್ತಾನೆ. ವಿಷಯ ತಿಳಿದ ನಾಯಕಿ ಸಂಚಿತಾ ಯೋಗೀಶ್‌ಗೆ ಧೈರ್ಯ ತುಂಬಿ ವಿಚಾರ ಸಂಕೀರಣಕ್ಕೆ ಕಳುಹಿಸಿದ್ದಾಗ ಆತ ವಿಜಯಶಾಲಿಯಾಗುವ ಸನ್ನಿವೇಶವನ್ನು ರಾಜಾಜಿನಗರದ ರಾಜಕುಮಾರ್ ಕಲಾಕ್ಷೇತ್ರದಲ್ಲಿ ನಿರ್ದೇಶಕ ಯೋಗೀಶ್‌ಹುಣಸೂರು ಚಿತ್ರೀಕರಿಸಿಕೊಂಡರು.

ನಾಯಕ ಯೋಗೀಶ್, ಸಂಚಿತಾಪಡುಕೋಣೆ, ದ್ವಾರಕೀಶ್ ಸೇರಿದಂತೆ ಅನೇಕ ಸಹಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ 'ರಾವಣ' ಚಿತ್ರದ 20 ದಿನಗಳ ಚಿತ್ರೀಕರಣ ಪೂರ್ಣವಾಗಿದ್ದು ಮುಂದಿನ ಹಂತದ ಚಿತ್ರೀಕರಣ ಮಾರ್ಚ್ ತಿಂಗಳಲ್ಲಿ ನಡೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಕೆಂಗೇರಿ ಗಾಂಧಿ ಆಶ್ರಮಕ್ಕೆ ರಾವಣನ ಭೇಟಿ
ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X