»   » ಸೂಪರ್ ಮ್ಯಾನ್ ಹೃದಯ ಹಗುರಾಗಿದೆಯಂತೆ

ಸೂಪರ್ ಮ್ಯಾನ್ ಹೃದಯ ಹಗುರಾಗಿದೆಯಂತೆ

Posted By:
Subscribe to Filmibeat Kannada

ಪ್ರಜ್ವಲ್ ದೇವರಾಜ್ ನಟಿಸುತ್ತಿರು 'ಸೂಪರ್ ಮ್ಯಾನ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಇತ್ತೀಚೆಗೆ ಹಾಡಿನ ಚಿತ್ರೀಕರಣ ನಡೆಯಿತು. ಈ ಮನ ಹಗುರಾಗಿದೆ, ಹೃದಯ ಬಾನಲ್ಲಿ ಹಾರಾಡಿದೆ, ಒಲವು ಸವಿಯಾಗಿದೆ, ಜೇನಿನಾ ಸಿಹಿ ಹನಿಯಾಗಿದೆ ಎಂಬ ಹಾಡನ್ನು ಛಾಯಾಗ್ರಾಹಕ ವಿನೋದ್ ಭಾರತಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

ಧನುಷ್ ಮತ್ತು ತೇಜಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಸ್.ಚಂದ್ರಶೇಖರ್, ಹೊಸಬೂದನೂರು ನಿರ್ಮಿಸುತ್ತಿರುವ ಚಿತ್ರಕ್ಕೆ ಕೋಲಾಲ್ ನಾಗೇಶ್ ನಿರ್ದೇಶನವಿದೆ. ಚಿತ್ರಕ್ಕೆ ಸಂಗೀತ ರಘು ದೀಕ್ಷಿತ್. ಸಂಕಲನ ಗೋವರ್ಧನ್, ಸಾಹಸ ಕೆ ರವಿವರ್ಮ, ಸಂಭಾಷಣೆ ಜಯಕಣ್ಣನ್, ನೃತ್ಯ 5 ಸ್ಟಾರ್ ಗಣೇಶ್, ಕಲೆ ಹೊಸಮನೆ ಮೂರ್ತಿ ಅವರದು.

ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ರಾಮಕೃಷ್ಣ, ಶರಣ್, ಶಿವಕುಮಾರ್ ಪದ್ಮಜಾರಾವ್, ಸುಧಾ ಬೆಳವಾಡಿ, ನಯನ ಮುಂತಾದವರು ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada