For Quick Alerts
  ALLOW NOTIFICATIONS  
  For Daily Alerts

  ಕಿರಾತಕನಿಂದ '420' ಆದ ಗೋಲ್ಡನ್ ಸ್ಟಾರ್ ಗಣೇಶ್

  |

  ಹಿಂದೊಮ್ಮೆ ಗಣೇಶ್ 420 ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಯಾರು ಯಾವಾಗ 420 ಮಾಡಲಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಬಂದಿರಲಿಲ್ಲ. ಈಗ ಪಕ್ಕಾ ಆಗಿದೆ. ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಗಣೇಶ್ ರನ್ನು ಸದ್ಯದಲ್ಲೇ 420 ಮಾಡಲಿದ್ದಾರೆ. ಅವರೀಗ ಕೆ ಮಂಜು ನಿರ್ಮಾಣ, ದುನಿಯಾ ವಿಜಯ್ ಚಿತ್ರ ರಜನಿಕಾಂತ್ ಚಿತ್ರೀಕರಣದಲ್ಲಿದ್ದಾರೆ. ಅದಾದನಂತರ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ.

  ರಿಮೇಕ್ ಚಿತ್ರಗಳಿಗೆ ಪ್ರಸಿದ್ಧಿಯಾಗಿರುವ ಎಂ.ಡಿ. ಶ್ರೀಧರ್ ಇದನ್ನು ನಿರ್ದೇಶಿಸಬೇಕಿತ್ತು. ಕಥೆಯ ಎಳೆ ಕೂಡ ಅವರದ್ದೇ. ಆದರೆ ಸದ್ಯ ಪ್ರಜ್ವಲ್ ದೇವರಾಜ್ ಜೊತೆ ಸಾಗರ್ ಮತ್ತು ಗಲಾಟೆ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಅವರಿಗೆ ಗಣೇಶ್ ರನ್ನು 420 ಮಾಡುವಷ್ಟು ಪುರುಸೊತ್ತಿಲ್ಲ. ಹಾಗಾಗಿ ಕಿರಾತಕ ಪ್ರದೀಪ್ ರಾಜ್ ಕೈಗೆ ಒಪ್ಪಿಸಿದ್ದಾರೆ.

  ಈ ಮೊದಲು ಗಣೇಶ್ ಜೊತೆ ಚೆಲ್ಲಾಟ ಮತ್ತು ಕೃಷ್ಣ ರೀಮೇಕ್ ಚಿತ್ರಗಳನ್ನು ಮಾಡಿ ಗೆದ್ದಿರುವ ಶ್ರೀಧರ್ ಅವರು ಗಣೇಶ್ ಗಾಗಿಯೇ ಕಥೆ ಮಾಡಿದ್ದರು. ಆದರೀಗ ಸಮಯದ ಅಭಾವದಿಂದ ಕೈಚೆಲ್ಲಿದ್ದಾರೆ. ಅವರ ಎಳೆಯನ್ನು ವಿಸ್ತರಿಸಿ, ಸಿನಿಮಾಕಥೆ ರೂಪ ಕೊಟ್ಟದ್ದು ಬಿ.ಎ. ಮಧು. ಈಗ ಎಲ್ಲವೂ ರೆಡಿಯಾಗಿ ಸಿನಿಮಾ ಸೆಟ್ಟೇರುತ್ತಿದೆ. ಸದ್ಯದಲ್ಲಿಯೇ ಗೋಲ್ಡನ್ ಸ್ಟಾರ್ 420 ಆಗಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Golden Star Ganesh acts in the movie 420. Kirataka Fame Pradeep Raj Directs this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X