»   » ಕಿಂಗ್ ಫಿಶರ್ ಕ್ಯಾಲೆಂಡರ್ ಲೋಕಾರ್ಪಣೆ

ಕಿಂಗ್ ಫಿಶರ್ ಕ್ಯಾಲೆಂಡರ್ ಲೋಕಾರ್ಪಣೆ

Subscribe to Filmibeat Kannada

ಕಣ್ಮನ ತಣಿಸುವ 2010ನೇ ಸಾಲಿನ ಕಿಂಗ್ ಫಿಶರ್ ಕ್ಯಾಲೆಂಡರ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಮೋಹಕ ಕ್ಯಾಲೆಂಡರನ್ನು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಭಾನುವಾರ(ಡಿ.20) ಲೋಕಾರ್ಪಣೆ ಮಾಡಿದರು. ಮೋಹಕ ರೂಪದರ್ಶಿಯರು, ಹೊರಾಂಗಣ ದೃಶ್ಯಗಳು, ಮೈನವಿರೇಳಿಸುವ ಛಾಯಾಚಿತ್ರಗಳಿಗೆ ಹಾಗೂ ಈಜುಡುಗೆ ಸುಂದರಿಯರಿಗೆ ಗೋಡೆ ಕ್ಯಾಲೆಂಡರ್ ಗಳಲ್ಲೇ ಹೆಸರುವಾಸಿ ಕಿಂಗ್ ಫಿಶರ್ ಕ್ಯಾಲೆಂಡರ್!

ಕಳೆದ ಏಳು ವರ್ಷಗಳಿಂದ ರೂಪದರ್ಶಿಯರ ಚೆಲುವನ್ನು ಅನಾವರಣಗೊಳಿಸುತ್ತಾ ಬಂದಿದೆ ಕಿಂ ಗ್ ಫಿಶರ್ ಕ್ಯಾಲೆಂಡರ್. ಈ ಸಲ ಎಂಟನೇ ಆವೃತ್ತಿಯೂ ಬೆಡಗಿನ ಅರಗಿಣಿಯರನ್ನು ಹೊತ್ತು ತಂದಿದೆ. ಈಜುಡುಗೆ ತೊಟ್ಟ ಸುಂದರಿಯರನ್ನು ಅತುಲ್ ಕಸ್ಬೇಕರ್ ತಮ್ಮ ಕ್ಯಾಮೆರಾದಲ್ಲಿ ಬಂಧಿಸಿದ್ದಾರೆ.

ಕ್ಯಾಲೆಂಡರ್ ಬಿಡುಗಡೆ ಮಾಡಿದ ದೀಪಿಕಾ ಪಡುಕೋಣೆ ಮಾತನಾಡುತ್ತಾ, ಆರಂಭದಲ್ಲಿ ನಾನೂ ಈ ಕ್ಯಾಲೆಂಡರ್ ನ ಭಾಗವಾಗಿದ್ದೆ. ವರ್ಷದಿಂದ ವರ್ಷಕ್ಕೆ ಈ ಕ್ಯಾಲೆಂಡರ್ ಹೆಚ್ಚು ಹೆಚ್ಚು ಆಕರ್ಷಕವಾಗಿ ಮೂಡಿಬರುತ್ತಿದೆ. ಅತ್ಯಾಕರ್ಷಕವಾಗಿರುವ ಮೂಡಿಬರಲು ಶ್ರಮಿಸಿದ ಹುಡುಗಿಯರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದರು.

ಈ ಹಿಂದೆ ದೀಪಿಕಾ 2006ನೇ ಸಾಲಿ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಗುಣಮಟ್ಟದ ಕಿಂಗ್ ಫಿಶರ್ ಕ್ಯಾಲೆಂಡರ್ ಕೇವಲ ಭಾರತದಷ್ಟೇ ಅಲ್ಲ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಯುಬಿ ಗ್ರೂಪ್ ನ ಅಧ್ಯಕ್ಷ ವಿಜಯ ಮಲ್ಯ ಸಹ ಉಪಸ್ಥಿತರಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada