»   » 'ಪೃಥ್ವಿ' ನಂತರ 'ಜಾಕಿ'ಯಾಗಿ ಪವರ್ ಸ್ಟಾರ್

'ಪೃಥ್ವಿ' ನಂತರ 'ಜಾಕಿ'ಯಾಗಿ ಪವರ್ ಸ್ಟಾರ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ಸದ್ಯಕ್ಕೆ 'ಪೃಥ್ವಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಪೃಥ್ವಿ' ಜೋಡಿಯಾಗಿ ಪಾರ್ವತಿ ಮೆನನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸೂರಪ್ಪ ಬಾಬು ಮತ್ತು ಎನ್ ಎಸ್ ರಾಜಕುಮಾರ್ ನಿರ್ಮಾಣದ ಚಿತ್ರಕ್ಕೆ ಜಾಕೋಬ್ ವರ್ಗೀಸ್ ನಿರ್ದೇಶಕರು.

ಪೃಥ್ವಿ ಚಿತ್ರೀಕರಣ ಮುಗಿದ ಬಳಿಕ 'ಜಾಕಿ' ಚಿತ್ರ ಸೆಟ್ಟೇರಲಿದೆ. ಈ ಚಿತ್ರವನ್ನು 'ದುನಿಯಾ' ಖ್ಯಾತಿಯ ಸೂರಿ ನಿರ್ದೇಶಿಸಲಿದ್ದಾರೆ. ಅದಾದ ಬಳಿಕ ತಮಿಳಿನ 'ನಾಡೋಡಿಗಳ್'ರೀಮೇಕ್ ಚಿತ್ರದಲ್ಲಿ ಪುನೀತ್ ತೊಡಗಿಕೊಳ್ಳಲಿದ್ದಾರೆ.

ನಾಡೋಡಿಗಳ್ ಎಂದರೆ ಅಲೆಮಾರಿ ಎಂದರ್ಥ. ದುಡಿಮೆಯನ್ನರಸಿ ಊರೂರು ಅಲೆವ ಯುವ ಪೀಳಿಗೆಯ ನೋವು ನಲಿವುಗಳೇ ಚಿತ್ರದ ಕತೆ. ಸಣ್ಣ ಊರೊಂದರ ಕರುಣಾ(ಶಶಿಕುಮಾರ್), ಚಂದನ್(ವಿಜಯ್ ವಸಂತ್) ಹಾಗೂ ಪಾಂಡಿಯನ್ (ಭರಣಿ) ಮೂವರು ಯುವಕರ ಸ್ನೇಹ, ಬಿರುಕು ಕುರಿತ ನವಿರಾದ ಕಥೆ ಯನ್ನು ನಾಡೋಡಿಗಳ್ ಚಿತ್ರ ಹೊಂದಿದೆ.

Please Wait while comments are loading...