For Quick Alerts
  ALLOW NOTIFICATIONS  
  For Daily Alerts

  ಸೌಮಿತ್ರ ಚಟರ್ಜಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ

  By Rajendra
  |

  ಭಾರತೀಯ ಚಿತ್ರರಂಗದ ಮೇರು ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೆ ಬಂಗಾಲಿ ನಟ ಸೌಮಿತ್ರ ಚಟರ್ಜಿ (77) ಅವರು ಪಾತ್ರರಾಗಿದ್ದಾರೆ. ಬಂಗಾಳಿ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಾದ ಸತ್ಯಜಿತ್ ರೇ, ತಪನ್ ಸಿನ್ಹಾ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿದ ಅನುಭವ ಚಟರ್ಜಿ ಅವರಿಗಿದೆ. ಅವರ ಗರಡಿಯಲ್ಲೇ ಚಟರ್ಜಿ ಪಳಗಿದ್ದು.

  ಪ್ರಶಸ್ತಿ ಬಂದ ಬಗ್ಗೆ ಪ್ರತಿಕ್ರಿಯಿಸಿರುವ ಚಟರ್ಜಿ ಅವರು, 53 ವರ್ಷಗಳ ತಮ್ಮ ಸುದೀರ್ಘ ಶ್ರಮಕ್ಕೆ ಸಂದ ಗೌರವ ಇದು. ಪ್ರಶಸ್ತಿ ಬಂದ ಕಾರಣ ಎಲ್ಲರೂ ತಮ್ಮನ್ನು ಗುರುತಿಸುವಂತಾಗಿದೆ. ತಮ್ಮಲ್ಲಿನ ನಟನಾ ಸಾಮರ್ಥ್ಯವನ್ನು ಹೊರಗೆಳೆಯಲು ಕಾರಣರಾದ ಎಲ್ಲರಿಗೂ ತಾನು ಆಭಾರಿಯಾಗಿದ್ದೇನೆ ಎಂದಿರುವ ಅವರು ಸತ್ಯಜಿತ್ ರೇ ಹಾಗೂ ತಪನ್ ಅವರನ್ನು ವಿಶೇಷವಾಗಿ ಸ್ಮರಿಸಿದ್ದಾರೆ.

  'ಅಪುರ್ ಸಂಸಾರ್' ಎಂಬ ಚಿತ್ರದ ಮೂಲಕ 1959ರಲ್ಲಿ ಚಟರ್ಜಿ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಅಲ್ಲಿಂದ ಆರಂಭವಾದ ಅವರ ಸಿನಿ ಪಯಣದಲ್ಲಿ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅವರ ಅಭಿನಯದ ಎಲ್ಲ ಕಲಾತ್ಮಕ ಚಿತ್ರಗಳು ಮೆಚ್ಚುಗೆ ಪಾತ್ರವಾಗಿವೆ. ಅವುಗಳಲ್ಲಿ ಮುಖ್ಯವಾಗಿ ಚಾರುಲತಾ, ಘರೆ ಬೈರ್, ಸೊನರ್ ಕಲ್ಲಾ ಚಿತ್ರಗಳನ್ನು ಹೆಸರಿಸಬಹುದು. (ಏಜೆನ್ಸೀಸ್)

  English summary
  Iconic Bengali actor Soumitra Chatterjee, who was one of the favourites of late film maestro Satyajit Ray, is the recipient of the highest honour in India cinema, the Dadasaheb Phalke Award, for the year 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X