»   » ಜೋಗಯ್ಯನಿಗೆ ಕಡೆಗೂ ಮುಹೂರ್ತ ಫಿಕ್ಸ್

ಜೋಗಯ್ಯನಿಗೆ ಕಡೆಗೂ ಮುಹೂರ್ತ ಫಿಕ್ಸ್

Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ'ನಿಗೆ ಕಡೆಗೂ ಮುಹೂರ್ತ ನಿಗದಿಯಾಗಿದೆ. 2010ರ ಏಪ್ರಿಲ್ 24ರಂದು 'ಜೋಗಯ್ಯ' ಚಿತ್ರ ಸೆಟ್ಟೇರಲಿದೆ. ಏಪ್ರಿಲ್ 24 ವರನಟ ಡಾ.ರಾಜ್ ಅವರ ಹುಟ್ಟುಹಬ್ಬ. ಹಾಗಾಗಿ 'ಜೋಗಯ್ಯ'ನನ್ನು ಅಂದೇ ಆರಂಭಿಸಲು ನಿರ್ದೇಶಕ ಪ್ರೇಮ್ ಸಿದ್ಧತೆ ನಿರ್ಧರಿಸಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತಾ ನಿರ್ಮಾಪಕಿ. ಶಿವಣ್ಣನ ವೃತ್ತಿ ಜೀವನದಲ್ಲಿ ಜೋಗಿ ಮರೆಯಲಾಗದ ಚಿತ್ರ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ ಚಿತ್ರ. ಶಿವಣ್ಣನ ಐವತ್ತನೇ ಚಿತ್ರ ಎಕೆ 47, ಭರ್ಜರಿ ಹಿಟ್ ಚಿತ್ರವಾಗಿತ್ತು. ನೂರನೇ ಚಿತ್ರವಾಗಿ ಬರಲಿರುವ 'ಜೋಗಯ್ಯ' ಸಹ ದಾಖಲೆ ನಿರ್ಮಿಸಲಿದೆ ಎಂಬ ವಿಶ್ವಾಸದಲ್ಲಿ ಪ್ರೇಮ್ ಹಾಗೂ ಶಿವಣ್ಣ ಇದ್ದಾರೆ.

ಈ ಹಿಂದೆ 'ಜೋಗಿ' ಹಾಗೂ 'ರಾಜ್ ದ ಶೋ ಮ್ಯಾನ್' ಚಿತ್ರಗಳನ್ನು ಏಪ್ರಿಲ್ 24ರಂದೇ ಪ್ರೇಮ್ ಆರಂಭಿಸಿದ್ದರು. ಆ ಎರಡು ಚಿತ್ರಗಳು ದಾಖಲೆ ನಿರ್ಮಿಸಿ ಪ್ರೇಮ್ ಗೆ ಒಳ್ಳೆಯ ಹೆಸರು ತಂದಿದ್ದವು. ಇದೀಗ ಜೋಗಯ್ಯ ಬಗ್ಗೆಯೂ ನಿರೀಕ್ಷೆಗಳು ಮುಗಿಲು ಮುಟ್ಟಿವೆ. ಇಪ್ಪತ್ತು ದಿನಗಳ ಕಾಲ ಮುಂಬೈ ಹಾಗೂ ಕೆಲದಿನಗಳ ಕಾಲ ವಿದೇಶದಲ್ಲೂ ಜೋಗಯ್ಯನ ಚಿತ್ರೀಕರಣ ನಡೆಯಲಿದೆಯಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada