»   » ಹುಬ್ಬಳ್ಳಿ ಹುಡುಗಿ ಮಾಧುರಿ ಈಗ ಮಿಸ್ ಕರ್ನಾಟಕ 2011

ಹುಬ್ಬಳ್ಳಿ ಹುಡುಗಿ ಮಾಧುರಿ ಈಗ ಮಿಸ್ ಕರ್ನಾಟಕ 2011

Posted By:
Subscribe to Filmibeat Kannada
ಹುಬ್ಬಳ್ಳಿಯ ಹುಡುಗಿ ಮಾಧುರಿ ಅವರ ಮುಡಿಗೆ ಈ ಸಾಲಿನ ಮಿಸ್ ಕರ್ನಾಟಕ 2011 ಪಟ್ಟ ಒಲಿದಿದೆ. ಎಲ್ಲ ಸುತ್ತುಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮಾಧುರಿ ಅವರು ಈ ಪಟ್ಟವನ್ನು ಅಲಂಕರಿಸಿದ್ದಾರೆ. ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಮಿಸ್ ಕರ್ನಾಟಕ 2011ನ್ನು ಆಯೋಜಿಸಲಾಗಿತ್ತು.

ಇಂಡಿಯನ್ ಕ್ಲಾಸಿಕ್ ಆರ್ಟ್ಸ್ ಹಾಗೂ ಕೆಎಸ್‌ಐಸಿ ಮೈಸೂರು ಸಿಲ್ಕ್ ಸಂಸ್ಥೆ ಸಂಯುಕ್ತವಾಗಿ ಮಿಸ್ ಕರ್ನಾಟಕ 2011 ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ಮೂರು ಸುತ್ತುಗಳ ಈ ಸೌಂದರ್ಯ ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 11 ಸ್ಪರ್ಧಿಗಳು ಭಾಗವಹಿಸಿದ್ದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾರ್ಯಕ್ರಮದ ಸಂಘಟಕಿ ರೂಪಾ ಅಯ್ಯರ್, ಸಿನಿಮಾ ತಾರೆಗಳಾದ ರಾಗಿಣಿ ದ್ವಿವೇದಿ, ಪ್ರಿಯಾ ಹಾಸನ್, ರೂಪಿಕಾ, ಕಾವ್ಯಾ ಮುಂತಾದವರು ಉಪಸ್ಥಿತರಿದ್ದರು. ಶಿವಣ್ಣ ಹಾಡಿದ ಕೆಲ ಚಿತ್ರಗೀತೆಗಳಿಗೆ ರ‌್ಯಾಂಪ್ ಮೇಲೆ ಹಾಕಿದ ಹೆಜ್ಜೆಗಳು ನೋಡುಗರ ಗಮನಸೆಳೆದವು. (ದಟ್ಸ್‌ಕನ್ನಡಸಿನಿವಾರ್ತೆ)

English summary
Miss Karnataka 2011, the fashion show jointly organised by the Karnataka Silk Industries Corporation (KSIC) and India Classic Arts (an organisation working for children living with HIV/AIDS), culminated with the crowning of Madhuri from Hubli as ‘Miss Karnataka'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada