For Quick Alerts
  ALLOW NOTIFICATIONS  
  For Daily Alerts

  ಗುಲ್ಬರ್ಗ, ಬಾದಾಮಿಯಲ್ಲಿ 'ನಮ್ಮಣ್ಣ ಡಾನ್' ಅದ್ದೂರಿ ಯಾತ್ರೆ

  By Rajendra
  |

  'ನಮ್ಮಣ್ಣ ಡಾನ್' ಚಿತ್ರದ ಹಾಡುಗಳು ಮೊಬೈಲ್‌ನಲ್ಲಿ ಬಿಡುಗಡೆಯಾದ ನಂತರ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಚಿತ್ರ ಫೆಬ್ರವರಿ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಇತ್ತೀಚೆಗೆ ಗುಲ್ಬರ್ಗದತ್ತ ಪ್ರಯಾಣ ಬೆಳೆಸಿತು. ಅಲ್ಲಿ ಡೊಳ್ಳುಕುಣಿತದೊಂದಿಗೆ ಮೆರವಣಿಗೆ ಮಾಡಿ ತಂಡಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.

  ಗುಲ್ಬರ್ಗದ ಪಿ.ಡಿ.ಎ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಅಲ್ಲಿ ಹುಡುಗರ ಜೊತೆ ಚರ್ಚೆ ನಡೆಸಲಾಯಿತು. ಬ್ಲೂಟೂತ್ ಮೂಲಕ ಆಡಿಯೋ ಸಾಂಗ್ ಹಾಗೂ ಟ್ರೇಲರ್ ಕಳುಹಿಸಲಾಯಿತು. ನಂತರ ಬಿಜಾಪುರಕ್ಕೆ ಭೇಟಿ ಅಲ್ಲೂ ವಿದ್ಯಾರ್ಥಿಗಳೊಂದಿಗೆ ಚರ್ಚೆ ಹಾಗೂ ಬ್ಲೂಟೂತ್ ಮೂಲಕ ಚಿತ್ರದ ಹಾಡುಗಳ ರವಾನೆ. ಅಲ್ಲಿಂದ ಬಾಬಾಮಿಗೆ ಪಯಣ ಅಲ್ಲಿ ರಾಜುತಾಳಿಕೋಟೆ ಅವರ ಕ್ಯಾಂಪ್‌ಗೆ ಭೇಟಿ ಮತ್ತು ಸಾಕಷ್ಟು ವೃತ್ತಿ ರಂಗಭೂಮಿ ಕಲಾವಿದರೊಂದಿಗೆ ಮಾತುಕತೆ.

  ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ತೆರೆದ ವಾಹನದಲ್ಲಿ ರಮೇಶ್ ಅರವಿಂದ್, ಸನಾತನಿ, ರವಿಜೋಶಿ ಅವರಿಂದ ರೋಡ್ ಷೋ. ಆನಂತರ ಸವದತ್ತಿ ಎಲ್ಲಮ್ಮನ ಜಾತ್ರಗೆ ಭೇಟಿ. ತಾಯಿ ಎಲ್ಲಮ್ಮನ ಆಶೀರ್ವಾದ ಪಡೆದು ತೆರೆದ ವಾಹನದಲ್ಲಿ ರೋಡ್ ಷೋ. ಹೋದಲೆಲ್ಲಾ ಜನರಿಂದ ಉತ್ತಮ ಪ್ರತಿಕ್ರಿಯೆ. ಮುಂದಿನ ಶೋಗಳು ಹಾಸನ, ಹುಬ್ಬಳ್ಳಿ, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ.

  ಹಾಸ್ಯ ಪ್ರಧಾನ ಈ ಚಿತ್ರದ ನಿರ್ದೇಶನವನ್ನೂ ರಮೇಶ್‌ಅರವಿಂದ್ ಅವರೇ ಮಾಡಿದ್ದಾರೆ. ರಮೇಶ್ ಅರವಿಂದ್, ಮೋನಾಪರವರೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ ನಮ್ಮಣ್ಣ ಡಾನ್ಗೆ ಭಾಸ್ಕರ್ ಅವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೆಶ್‌ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Ramesh Aravind promotes his latest directional venture 'Nammanna Don' in northern Karnataka. is an upcoming Kannada comedy film starring Ramesh Aravind, Mona Parvaresh and Sanathini in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X