»   » ಸದಾಶಿವ ಬ್ರಹ್ಮಾವರರಿಗೆ ವರದರಾಜು ಪ್ರಶಸ್ತಿ

ಸದಾಶಿವ ಬ್ರಹ್ಮಾವರರಿಗೆ ವರದರಾಜು ಪ್ರಶಸ್ತಿ

Posted By:
Subscribe to Filmibeat Kannada
ವರನಟ ಡಾ.ರಾಜ್ ಕುಮಾರ್ ಅವರ ಸಹೋದರ ಎಸ್ ಪಿ ವರದರಾಜು ಅವರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ಈ ಬಾರಿ ಇಬ್ಬರಿಗೆ ವರಿಸಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ ಬ್ರಹ್ಮಾವರ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಬಿ ಪಿ ರಾಜಮ್ಮ ಅವರಿಗೆ ಫೆಬ್ರವರಿ 26ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ರವೀಂದ್ರ ಕಲಾಕ್ಷೇತ್ರದ ನಯನ ಸಂಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 26ರ ಸಂಜೆ ನಡೆಯಲಿದೆ. ರಂಗಭೂಮಿ ಮತ್ತು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಕಲಾವಿದರಿಗೆ ಕಳೆದ ಮೂರು ವರ್ಷಗಳಿಂದ ಎಸ್ ಪಿ ವರದರಾಜು ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಎಸ್ ಪಿ ವರದರಾಜು ಆತ್ಮೀಯ ಬಳಗದಲ್ಲಿ ಡಾ.ಬರಗೂರು ರಾಮಚಂದ್ರಪ್ಪ, ಡಾ.ಜಯಮಾಲಾ, ಬಿ ಎನ್ ಸುಬ್ರಹ್ಮಣ್ಯ, ದೊಡ್ಡಹುಲ್ಲೂರು ರುಕ್ಕೋಜಿ, ಎಚ್ ಕೆ ಗೋವಿಂದಪ್ಪ, ಎ ಎನ್ ಪ್ರಹ್ಲಾದರಾವ್, ಗುಡಿಹಳ್ಳಿ ನಾಗರಾಜ್, ಡಾ.ವೇಮಗಲ್ ನಾರಾಯಣಸ್ವಾಮಿ, ವತ್ಸಲಾ ಮೋಹನ್ ಮತ್ತು ದೇವ ನಾಗೇಶ್ ಇದ್ದಾರೆ.

ಎಸ್ ಪಿ ವರದರಾಜು ಪ್ರಶಸ್ತಿ ಇದುವರೆಗೂ ಲಕ್ಷ್ಮಿದೇವಿ, ಪರಮಶಿವಯ್ಯ, ರತ್ನಾಕರ್, ನಾಗರತ್ನಮ್ಮ, ಶನಿಮಹದೇವಪ್ಪ ಮತ್ತು ಸರೋಜಮ್ಮ ದುತ್ತರಗಿ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಬಾರಿಯ ಪ್ರಶಸ್ತಿ ಸದಾಶಿವ ಬ್ರಹ್ಮಾವರ ಹಾಗೂ ಬಿ ಪಿ ರಾಜಮ್ಮ ಅವರನ್ನು ವರಿಸಿರುವುದು ವಿಶೇಷ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada